ಬೀದಿ ನಾಯಿ ದಾಳಿಯಿಂದ ಬಾಲಕನ ಸ್ಥಿತಿ ಗಂಭೀರ, ಚಿಕಿತ್ಸಾ ವೆಚ್ಚ ಭರ್ತಿಗೆ ಬಿಬಿಎಂಪಿ ಅಸ್ತು

ಬುಧವಾರ ಬೆಂಗಳೂರು ಚ್‌ಎಎಲ್‌ ಬಳಿಯ ವಿಭೂತಿಪುರ ಕೆರೆ ಸಮೀಪ ಬೀದಿ ನಾಯಿಗಳ ದಾಳಿಗೆ ಸಿಕ್ಕು ಗಂಬೀರ ಗಾಯಗೊಂಡಿದ್ದ ಬಾಲಕ ಪ್ರವೀಣ್ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳು ಬಾಲಕ ಪ್ರವೀಣ್
ಗಾಯಾಳು ಬಾಲಕ ಪ್ರವೀಣ್
Updated on
ಬೆಂಗಳೂರು: ಬುಧವಾರ ಬೆಂಗಳೂರು ಎಚ್‌ಎಎಲ್‌ ಬಳಿಯ ವಿಭೂತಿಪುರ ಕೆರೆ ಸಮೀಪ ಬೀದಿ ನಾಯಿಗಳ ದಾಳಿಗೆ ಸಿಕ್ಕು ಗಂಬೀರ ಗಾಯಗೊಂಡಿದ್ದ ಬಾಲಕ ಪ್ರವೀಣ್ ಸ್ಥಿತಿ ಚಿಂತಾಜನಕವಾಗಿದೆ.
ಗಾಯಾಳು ಬಾಲಕನಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದ್ದು ಬಿಬಿಎಂಪಿಮೇಯರ್ ಸಂಪತ್ ರಾಜ್ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಗುರುವಾರ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಪ್ರವೀಣ್ ಚಿಕಿತ್ಸೆ ವೆಚ್ಚವನ್ನು ಬಿಬಿಎಂಪಿ ಯಿಂದಲೇ ನಿಡುವುದಾಗಿ ಅವರು ಹೇ:ಳಿದ್ದಾರೆ.
ತಲೆ, ಮೂಗು, ಎದೆ, ಕೈಗಳು, ಕಾಲುಗಳಿಗೆ ಗಂಬಿರ ಗಾಯವಾಗಿರುವ ಪ್ರವೀಣ್ ನನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
"ವೈದ್ಯಕೀಯ ಚಿಕಿತ್ಸೆಗಾಗಿ ಎಷ್ಟೇ ವೆಚ್ಚವಾದರೂ ಅದನ್ನು ಬಿಬಿಎಂಪಿಯಿಂದ ಪಾವತಿಸುವುದಾಗಿ ನಾನು ವೈದ್ಯರಿಗೆ ಹೇಳಿದ್ದೇನೆ" ಸಂಪತ್ ರಾಜ್ ಹೇಳಿದ್ದಾರೆ.
ಇದಕ್ಕೆ ಮುನ್ನ ಬುಧವಾರ ಆಸ್ಪತ್ರೆಯಲ್ಲಿ ತನ್ನ ಮಗನ ಸ್ಥಿತಿ ಕುರಿತು ಮಾತನಾಡಿದ ಪ್ರವೀಣ್ ತಾಯಿ ಮುರುಗಮ್ಮ"ನನ್ನ ಮಗನಿಗಾಗಿ ಎಲ್ಲರೂ ಪ್ರಾರ್ಥಿಸಿರಿ, ಅವನನ್ನು ನಮ್ಮ ಏರಿಯಾದಲ್ಲಿ ಎಲ್ಲರೂ ಪ್ರೀತಿಸುತ್ತಾರೆ. ಅವನೊಬ್ಬ ಸ್ನೇಹ[ಪರ ಬಾಲಕ. ಅವನು ಮತ್ತೆ ಆಟವಾಡುವುದನ್ನು, ನೃತ್ಯ ಮಾಡುವುದನ್ನು ನಾನು ನೋಡಬೇಕು" ಎಂದು ಕಣ್ಣೀರು ಮಿಡಿದಿದ್ದರು.
ಇಷ್ಟಕ್ಕೂ ಪ್ರವೀಣ್ ಪೋಷಕರಾದ ಮುರುಗಮ್ಮ ಹಾಗೂ ಮನೋಹರ್ ಇಬ್ಬರೂ ಮಣಿಪಾಲ್ ಆಸ್ಪತ್ರೆಯಲ್ಲೇ ಹೌಸ್ ಕೀಪರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಮುರುಗಮ್ಮ ಕಳೆದ  11 ವರ್ಷಗಳಿಂದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಮನೋಹರ್ ಮೂರೂವರೆ ವರ್ಷಗಳಿಂಡ ಇಲ್ಲಿದ್ದಾರೆ.
ರೇಬೀಸ್: ಕರ್ನಾಟಕಕ್ಕೆ ಎರಡನೇ ಸ್ಥಾನ
ನ್ಯಾಷನಲ್ ಹೆಲ್ತ್ ಪ್ರೊಫೈಲ್ 2018 ರ ಪ್ರಕಾರ,ದೇಶದಲ್ಲಿ ರೇಬೀಸ್ ಕಾರಣದಿಂದ ಸಾವನ್ನಪ್ಪುವವರ ಸಂಖ್ಯಾ ಪ್ರಮಾಣದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನವಿದೆ.. ಬೆಂಗಳೂರಿನಲ್ಲಿ,ರೇಬೀಸ್ ವಿರುದ್ಧ ಕ್ರಿಮಿನಾಶಹ ಸಿಂಪಡನೆ ಹೊಣೆ ಹೊತ್ತಿರುವ ಏಳು ಏಜನ್ಸಿಗಳಿಗೆ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯವನ್ನೂ ವಹಿಸಲಾಗಿದೆ.
ರಾಜ್ಯದಲ್ಲಿ ಕಳೆದ ವರ್ಷ ವರದಿಯಾದ 97 ಪ್ರಕರಣಗಳಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.2016 ರಲ್ಲಿ ಒಟ್ಟು 22 ಜನ ರೇಬೀಸ್ ಖಾಯಿಲೆಯಿಂದ ಮೃತರಾಗಿದ್ದರು. 2012 ರ ಗಣತಿಯ ಪ್ರಕಾರ, ಬೆಂಗಳೂರಿನಲ್ಲಿ 2.9 ಲಕ್ಷ ನಾಯಿಗಳು ಇದ್ದವು ಅದರಲ್ಲಿ 1.05 ಲಕ್ಷ ಸಾಕುಪ್ರಾಣಿಗಳು ಮತ್ತು 1.85 ಲಕ್ಷ ನಾಯಿಗಳು ಬೀದಿ ನಾಯಿಗಳಾಗಿದೆ.
ಬಿಬಿಎಂಪಿ ಬೀದಿ ನಾಯಿಗಳಿಗೆ, ರೇಬೀಸ್ ಲಸಿಕೆ ಹಾಕುವ ಕಾರ್ಯಕ್ರಮಕ್ಕಾಗಿ ಸುಮಾರು 3 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ.. ಈ ವರ್ಷ ಮೇ ಅಂತ್ಯದವರೆಗೆ ಒತ್ಟು 2,174 ನಾಯಿ ಕಡಿತ ಪ್ರಕರಣಗಳು ವರದಿಯಾಗಿದೆ.2017 ರಲ್ಲಿ, ಬಿಬಿಎಂಪಿ ಮಿತಿಗಳಲ್ಲಿ 35,266 ನಾಯಿಗಳಿಗೆ  ಲಸಿಕೆ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com