ಮೈಸೂರು-ಬಳ್ಳಾರಿ ನಡುವೆ ಸರ್ಕಾರದ ತಾರತಮ್ಯ: ಹಂಪಿ ಉತ್ಸವ ಸಂಬಂಧ ಸರ್ಕಾರ-ಬಿಜೆಪಿ ಜಟಾಪಟಿ!

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ರದ್ದುಗೊಳಿಸಲು ಮುಂದಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ..
ಹಂಪಿ ಉತ್ಸವ (ಸಂಗ್ರಹ ಚಿತ್ರ)
ಹಂಪಿ ಉತ್ಸವ (ಸಂಗ್ರಹ ಚಿತ್ರ)
ಬಳ್ಳಾರಿ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ರದ್ದುಗೊಳಿಸಲು ಮುಂದಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 
ಹಲವು ಸಂಘ ಸಂಸ್ಥೆಗಳು, ಕಲಾವಿದರು ಹಂಪಿ ಉತ್ಸವ ಆಚರಣೆಗೆ ಆಗ್ರಹಿಸುತ್ತಿರುವ ನಡುವೆಯೇ, ಹಂಪಿ ಉತ್ಸವ ಆಚರಣೆ ಸಂಬಂಧ  ಈಗಾಗಲೇ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಸಂಸದ ವಿ.ಎಸ್‌.ಉಗ್ರಪ್ಪ ಹೇಳುವ ಮೂಲಕ ಉತ್ಸವ ನಡೆಯುವ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಭಾನುವಾರ ಬಳ್ಳಾರಿ ಬಿಜೆಪಿ ಮುಖಂಡರು ಸಭೆ ಸೇರಿ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಶಾಸಕ  ಸೋಮಶೇಖರ್ ರೆಡ್ಡಿರಾಜ್ಯ ಸರ್ಕಾರ ಮೈಸೂರು ಮತ್ತು ಬಳ್ಳಾರಿ ನಡುವೆ ತಾರತಮ್ಯ ಮಾಡುತ್ತಿದೆ.ಮೈಸೂರು ದಸರಾವನ್ನು ಯಾವಾಗಲೂ ಅದ್ಧೂರಿಯಾಗಿ ನಡೆಸಲಾಗುತ್ತಿದೆ, ಆದರೆ ಪಾರಂಪರಿಕ ತಾಣವಾದ ಹಂಪಿ ಉತ್ಸವವನ್ನು ಕಡೆಗಣಿಸುತ್ತಿದೆ, ಇದೊಂದು ಮೆಗಾ ಉತ್ಸವವಾಗಿ ಆಚರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಲವು ಸಾಹಿತಿಗಳು, ಮಠಾಧೀಶರು ಉತ್ಸವಕ್ಕಾಗಿ ಹಣ ಕಳುಹಿಸಿದ್ದಾರೆ, ಹಂಪಿ ಉತ್ಸವ ಆರಂಭಿಸಿದ ಮಾಜಿ ಉಪಮುಖ್ಯಮಂತ್ರಿ ಎಂಪಿ ಪ್ರಕಾಶ್ ಹಂಪಿ ಉತ್ಸವ ಆರಂಭಿಸಿದ್ದರು.
ಹಂಪರಿ ಉತ್ಸವಕ್ಕಾಗಿ ಎಲ್ಲರ ಬಳಿ ಹಣವನ್ನು  ಬಿಕ್ಷೆ ಬೇಡಿ ತರುವುದಾಗಿ ಹೇಳಿರುವ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. 2013 ರಲ್ಲೂ ಕೂಡ ಹಂಪಿ ಉತ್ಸವ ರದ್ದಾಗಿತ್ತು ಎಂದು ಸಂಸದ ವಿ.ಎಸ್ ಉಗ್ರಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com