ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ಸಿಸಿಟಿವಿ ಅಳವಡಿಕೆಯಿಂದ ಕಡಿಮೆಯಾಯ್ತು ದಲ್ಲಾಳಿಗಳ ಹಾವಳಿ!

ಗರಗ ಮತ್ತು ಅಳ್ನಾವರ್ ನಾಡಕಚೇರಿ ಹಾಗೂ ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಯಿಂದಾಗಿ ದಲ್ಲಾಳಿಗಳ ಹಾವಳಿ ಕಡಿಮೆಯಾಗಿದೆ....
ಧಾರವಾಡ: ಗರಗ ಮತ್ತು ಅಳ್ನಾವರ್  ನಾಡಕಚೇರಿ ಹಾಗೂ ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆಯಿಂದಾಗಿ ದಲ್ಲಾಳಿಗಳ ಹಾವಳಿ ಕಡಿಮೆಯಾಗಿದೆ.
ಹೆಚ್ಚಾಗಿದ್ದ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ತಹಶೀಲ್ದಾರ್ ಪ್ರಕಾಶ್ ಕುದರಿ ಸಿಸಿಟಿವಿ ಅಳವಡಿಸಲು ನಿರ್ಧಾರ ಕೈಗೊಂಡಿದ್ದರು. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ನಂತರ ಕಚೇರಿಗೆ ಬರುವ ದಲ್ಲಾಳಿಗಳ ಹಾವಳಿ ಸ್ವಲ್ಪ ತಹ ಬಂದಿಗೆ ಬಂದಿದೆ,
ಕೆಲವು ಸಿಬ್ಬಂದಿ ಬೆಂಬಲದಿಂದಾಗಿ ಏಜೆಂಟ್ ಗಳು ಕಚೇರಿಯ ಆವರಣಕ್ಕೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ 2017ರ  ಸೆಪ್ಟಂಬರ್ 16 ರಂದು ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು,ಸುಮಾರು 50 ಕ್ಕಿಂತ ಹೆಚ್ಚು ಸಿಬ್ಬಂದಿಗೆ ದಲ್ಲಾಳಿಗಳ ಜೊತೆ ಸಂಪರ್ಕವಿದೆ ಎಂಬ ಆರೋಪ ಕೇಳಿ ಬಂದಿತ್ತು, ಜೊತೆಗೆ ಅವರು ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ದೂರುಗಳು ಕೇಳಿ ಬಂದಿದ್ದವು.

Related Stories

No stories found.

Advertisement

X
Kannada Prabha
www.kannadaprabha.com