ಪವಿತ್ರ ಪುಸ್ತಕದ ಪ್ರೇರಣೆಯಿಂದ ಗೌರಿ ಲಂಕೇಶ್ ಹತ್ಯೆ: ಎಸ್ಐಟಿ ಹೇಳಿಕೆ ಅಪಹಾಸ್ಯ ಮಾಡಿದ ಸನಾತನ ಸಂಸ್ಥೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಹಿಂದೂ ಪರ ಸಂಘಟನೆಯೊಂದು....
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಹಿಂದೂ ಪರ ಸಂಘಟನೆಯೊಂದು ಪ್ರಕಟಿಸುವ 'ಕ್ಷಾತ್ರಧರ್ಮ ಸಾಧನ' ಎಂಬ ಪವಿತ್ರ ಪುಸ್ತಕದಿಂದ ಪ್ರೇರಣೆ ಪಡೆದು ಪತ್ರಕರ್ತೆಯ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿರುವುದಾಗಿ ಸನಾತನ ಸಂಸ್ಥೆ ಮಂಗಳವಾರ ವ್ಯಂಗ್ಯವಾಡಿದೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹನ್ಸ್ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹಿಂದೂ ಭಯೋತ್ಪಾದನೆಯನ್ನು ಬಿಂಬಿಸಲಾಗಿದೆ ಮತ್ತು ಮಾಲೆಗಾಂವ್ - 1 ಸಾಭೀತುಪಡಿಸುವಲ್ಲಿ ವಿಫಲವಾದ ನಂತರ ಈಗ ಮಾಲೆಗಾಂವ್ - 2 ಆರಂಭಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.
ಒಂದು ವೇಳೆ ಸಿಎಸ್ ಐಟಿ ಸನಾತನ ಸಂಸ್ಥೆಯ ಪವಿತ್ರ ಪುಸ್ತಕದ ಪ್ರೇರಣೆಯಿಂದಲೇ ಗೌರಿ ಲಂಕೇಶ್ ಹತ್ಯೆಯಾಗಿ ಎಂದು ಹೇಳುವುದಾದರೆ, ಲಕ್ಷಾಂತರ ಜನರನ್ನು ಹತ್ಯೆ ಮಾಡುತ್ತಿರುವ ಭಯೋತ್ಪಾದಕರಿಗೆ ಮತ್ತು ನಕ್ಸಲರಿಗೆ ಯಾವ ಪವಿತ್ರ ಪುಸ್ತಕ ಪ್ರೇರಣೆ ಎಂಬುದನ್ನು ಹೇಳಲಿ ಎಂದಿದ್ದಾರೆ.
ಇದೇ ವೇಳೆ ಎಸ್ ಐಟಿ ಬಂಧಿಸಿರುವ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ಯಾವುದೇ ನಂಟು ಹೊಂದಿಲ್ಲ ಎಂದು ರಾಜಹನ್ಸ್ ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com