ಕೈಗಾ ಪರಮಾಣು ವಿದ್ಯುತ್ ಕೇಂದ್ರ ಸ್ಥಾಪನೆಯಲ್ಲಿ ಅಪಾಯಕಾರಿ ಅಂಶ ಕಡೆಗಣನೆ: ನಿವೃತ್ತ ಐಎಎಸ್ ಅಧಿಕಾರಿ

ಕೈಗಾ ಪರಮಾಣು ವಿದ್ಯುತ್ ಕೇಂದ್ರದ ಉದ್ದೇಶಿತ 5 ಮತ್ತು 6ನೇ ರಿಯಾಕ್ಟರ್ ಸ್ಥಾಪನೆಯಲ್ಲಿ ...
ಕೈಗಾ ಪರಮಾಣು ವಿದ್ಯುತ್ ಸ್ಥಾವರ
ಕೈಗಾ ಪರಮಾಣು ವಿದ್ಯುತ್ ಸ್ಥಾವರ

ಕಾರವಾರ: ಕೈಗಾ ಪರಮಾಣು ವಿದ್ಯುತ್ ಕೇಂದ್ರದ ಉದ್ದೇಶಿತ 5 ಮತ್ತು 6ನೇ ರಿಯಾಕ್ಟರ್ ಸ್ಥಾಪನೆಯಲ್ಲಿ ವಿಕಿರಣ ಮತ್ತು ಪರಿಸರ ಸಂಬಂಧಿತ ಅಪಾಯಕಾರಿ ಅಂಶಗಳನ್ನು ಅಣುಶಕ್ತಿ ಇಲಾಖೆ ಕಡೆಗಣಿಸಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಕೇಂದ್ರ ವಿದ್ಯುತ್ ಮತ್ತು ಹಣಕಾಸು ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದ ಇಎಎಸ್ ಶರ್ಮಾ ಈ ಸಂಬಂಧ ಪರಮಾಣು ಇಂಧನ ಇಲಾಖೆ, ಅಣುಶಕ್ತಿ ಪ್ರಾಧಿಕಾರ ನಿಗಮದ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಪಾರಿಸರಿಕ ಪರಿಣಾಮ ಮೌಲ್ಯಮಾಪನ(ಇಇಎ) ವರದಿಯನ್ನು ತಾವು ಪರಿಶೀಲಿಸಿದ್ದು ಅದರಲ್ಲಿ ಪರಮಾಣು ವಿದ್ಯುತ್ ಘಟಕಗಳ ಉತ್ಪಾದನೆಯಿಂದ ಯಾವುದೇ ಅಪಾಯಗಳು ಎದುರಾಗುವ ಬಗ್ಗೆ ಮತ್ತು ದುಷ್ಪರಿಣಾಮಗಳ ಕುರಿತು ಮೌಲ್ಯಮಾಪನ ಮಾಡಿಲ್ಲ. ಸಂಪೂರ್ಣ ಅಧ್ಯಯನವಾಗುವವರೆಗೆ ಡಿಸೆಂಬರ್ 15ರಂದು ಇರುವ ಉದ್ದೇಶಿತ ಸಾರ್ವಜನಿಕ ವಿಚಾರಣೆಯನ್ನು ರದ್ದುಗೊಳಿಸಬೇಕು. ಮೇಲ್ನೋಟಕ್ಕೆ ಯೋಜನೆ ಕಾರ್ಯಸಾಧ್ಯವಲ್ಲದ ಕಾರಣ ಪರಮಾಣು ಇಂಧನ ಇಲಾಖೆ ಉದ್ದೇಶಿತ ಯೋಜನೆಯನ್ನು ಮುಂದುವರಿಸಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಫುಕುಶಿಮಾ ಘಟನೆಯ ನಂತರ ವಿಶ್ವದಾದ್ಯಂತ ಪರಮಾಣು ದುರಂತಗಳ ಪರಿಣಾಮಗಳ ಬಗ್ಗೆ ಆತಂಕಗಳಿವೆ. ಅದು ಮಾನವ ನಿರ್ಮಿತವಾಗಿರಬಹುದು ಅಥವಾ ನೈಸರ್ಗಿಕ ವಿಕೋಪಗಳಾಗಿರಬಹುದು. ಪರಮಾಣು ಇಂಧನದ ಸುರಕ್ಷತೆ ವಿಚಾರ ಬಂದಾಗ ಸ್ವತಂತ್ರ ಪರಮಾಣು ನಿಯಂತ್ರಣ ಪ್ರಾಧಿಕಾರವನ್ನು ಹಲವು ರಾಷ್ಟ್ರಗಳು ಬಯಸುತ್ತವೆ. ಭಾರತದಲ್ಲಿ ಪರಮಾಣು ನಿಯಂತ್ರಣ ಪ್ರಾಧಿಕಾರ ಅಣುಶಕ್ತಿ ಇಲಾಖೆಯ ಅಧೀನದಲ್ಲಿ ಬರುತ್ತದೆ ಎಂದು ಶರ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com