ಕೊಡಗು: 43 ಟನ್ ಅಕ್ಕಿ ಸೇರಿದಂತೆ ಕೊಳೆಯುತ್ತಿದೆ 8 ಲಕ್ಷ ರು. ಪರಿಹಾರ ಸಾಮಾಗ್ರಿ

ಕೊಡಗು ಪ್ರವಾಹ ಕಳೆದು ಹೆಚ್ಚು ಕಮ್ಮಿ 3 ತಿಂಗಳಾದರೂ ಮಡಿಕೇರಿಗೆ ಕಳುಹಿಸಿದ್ದ ಪರಿಹಾರ ಸಾಮಾಗ್ರಿ ಸಂಪೂರ್ಣ ಉಪಯೋಗವಾಗದೇ ಕೊಳೆಯುತ್ತಿವೆ.
ಬಳಕೆಯಾಗದೇ ಉಳಿದಿರುವ ಪರಿಹಾರ ಸಾಮಾಗ್ರಿ
ಬಳಕೆಯಾಗದೇ ಉಳಿದಿರುವ ಪರಿಹಾರ ಸಾಮಾಗ್ರಿ
ಮಡಿಕೇರಿ: ಕೊಡಗು ಪ್ರವಾಹ ಕಳೆದು ಹೆಚ್ಚು ಕಮ್ಮಿ 3 ತಿಂಗಳಾದರೂ ಮಡಿಕೇರಿಗೆ ಕಳುಹಿಸಿದ್ದ ಪರಿಹಾರ ಸಾಮಾಗ್ರಿ ಸಂಪೂರ್ಣ ಉಪಯೋಗವಾಗದೇ ಕೊಳೆಯುತ್ತಿವೆ.
ಸುಮಾರು 43 ಟನ್ ಅಕ್ಕಿ ಸೇರಿದಂತೆ 8 ಲಕ್ಷ ರು. ಪರಿಹಾರ ಸಾಮಾಗ್ರಿ ಮಡಿಕೇರಿಯ ಜ್ಯೂನಿಯರ್ ಕಾಲೇಜ್ ಕ್ಯಾಂಪಸ್ ನಲ್ಲಿ ಕೊಳೆಯುತ್ತಿವೆ. ಹೊಸದಾಗಿ ನಿರ್ಮಾಣವಾಗಿರುವ ಕಾಲೇಜಿನ ಕ್ಲಾಸ್ ರೂಮ್  ಗಳಲ್ಲಿ ಬಾತ್ ರೂಂ ಮತ್ತು ಶೌಚಾಲಯ ಸಾಮಾಗ್ರಿಗಳಾದ,  ಸೋಪು, ಟೂತ್ ಬ್ರಶ್, ಪ್ಲಾಸ್ಟಿಕ್ ಬಕೆಟ್, ಮಗ್ಸ್  ಸೇರಿದಂತೆ ಹೊಸ ಬಟ್ಟೆಗಳು, ಸ್ಟೇಷನರಿ ಸಾಮಾಗ್ರಿಗಳಾದ ಬುಕ್ ಮತ್ತು ಪೆನ್ ಇವೆ,
ಹೀಗಾಗಿ ಇಲ್ಲಿರುವ ವಸ್ತುಗಳನ್ನು ತೆರವುಗೊಳಿಸುವಂತೆ ಕಾಲೇಜು ಆಡಳಿತ ಮಂಡಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಳೇಯ ಕ್ಲಾಸ್ ರೂಂ ಗಳಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಸುಮಾರು 500 ಮಂದಿ ಸಂತ್ರಸ್ತರಿದ್ದಾರೆ,ಅವರಿಗಾಗಿ ಸಾಮಾಗ್ರಿಗಳನ್ನು ಬಳಸಲಾಗುತ್ತಿದೆ, ಅವುಗಳು ಹಾಳಾಗದಂತೆ, ಸಂತ್ರಸ್ತರಿಗೆ ತಲುಪಿಸುವಲ್ಲಿ ನಿಗಾ ವಹಿಸುತ್ತೇವೆ, ಒಬ್ಬ ಸಂತ್ರಸ್ತರಿಗೆ ಪುನರ್ವಸತಿ ಸಿಕ್ಕ ಮೇಲೆ ಉಳಿದ ಸಾಮಾಗ್ರಿಗಳನ್ನು ಬೇರೆ  ಸಂತ್ರಸ್ತರಿಗೆ ನೀಡುತ್ತೇವೆ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಇನ್ನೂ 7 ಪರಿಹಾರ ಕೇಂದ್ರಗಳು ಕೆಲಸ ಮಾಡುತ್ತಿವೆ, ಕಾಲೇಜಿನಿಂದ ಪರಿಹಾರ ಸಾಮಾಗ್ರಿಗಳನ್ನು ತಂದು ಎಲ್ಲವನ್ನು ವಿತರಿಸಲಾಗುತ್ತದೆ ಎಂದು ಹೆಚ್ಚುವರಿ ಉಪ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com