ಮಿತವ್ಯಯ ಆಡಳಿತ ಮಂತ್ರ ಪಠಿಸುವ ಸಿಎಂ: ಸಹೋದರ ರೇವಣ್ಣರಿಂದ ದುಂದು ವೆಚ್ಚ

ಮುಖ್ಯಮಂತ್ರಿ ಕುಮಾರ ಸ್ವಾಮಿ ಮಿತವ್ಯಯದ ಆಡಳಿತ ನಡೆಸಬೇಕು ಎಂದು ನಿರ್ಧರಿಸಿದ್ದರೇ, ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಸಿಎಂ ಸಹೋದರ ...
ಎಚ್.ಡಿ ರೇವಣ್ಣ
ಎಚ್.ಡಿ ರೇವಣ್ಣ
ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಮಿತವ್ಯಯದ ಆಡಳಿತ ನಡೆಸಬೇಕು ಎಂದು ನಿರ್ಧರಿಸಿದ್ದರೇ, ಲೋಕೋಪಯೋಗಿ ಇಲಾಖೆ  ಸಚಿವ ಹಾಗೂ ಸಿಎಂ ಸಹೋದರ ಹೊಸ ವಾಹನಗಳ ಖರೀದಿಗೆ ಸಿದ್ಧತೆ ನಡೆಸುತ್ತಿದ್ದಾರೆ. 
ನವೆಂಬರ್ 28 ರಂದು ನಡೆದ ಸಭೆಯಲ್ಲಿ 300 ಹೊಸ ವಾಹನ ಖರೀದಿಸಲು ರೇವಣ್ಣ ನಿರ್ಧರಿಸಿದ್ದಾರೆ, 7 ವರ್ಷ ಹಳೇಯದಾಗಿರುವ ಹಾಗೂ 2 ಲಕ್ಷ ಕಿಮೀ ದೂರ ಕ್ರಮಿಸಿರುವ ವಾಹನಗಳನ್ನು ಬದಲಾಯಿಸಲು ರೇವಣ್ಣ ಚಿಂತಿಸಿದ್ದಾರೆ.
ಈ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕಾಪಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದೆ. ಲೋಕೋಪಯೋಗಿ ಇಲಾಖೆಯ ಎಲ್ಲಾ ವಿಭಾಗಗಳು ಹಾಗೂ ಉಪ ವಿಭಾಗಗಳ ಅಧಿಕಾರಿಗಳಿಗೆ ವಾಹನಗಳ ಪಟ್ಟಿ ನೀಡುವಂತೆ ಸೂಚಿಸಲಾಗಿದೆ,  
ಸಭೆ ನಡೆದ ದಿನ ಇಲಾಖೆಯ ಮೂರು ವಿಭಾಗಗಳು ತಮಗೆ ಬೇಕಾಗಿರುವ ವಾಹನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಉಳಿದ ಇಲಾಖೆಗಳು ಡಿಸೆಂಬರ್ 7 ರೊಳಗೆ ವರದಿ ಸಲ್ಲಿಸಲಿವೆ.,
ಬೆಂಗಳೂರು ದಕ್ಷಿಣ ವಿಭಾಗ 125 ವಾಹನಗಳಿಗೆ ಪ್ರಸ್ತಾವನೆಯಿಟ್ಟಿದೆ, ಕೇಂದ್ರ ಸರ್ಕಾರದ ಅನುದಾನದಿಂದ 25 ಕೋಟಿ ರು ಹಣ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com