ಕೆಟ್ಟ ಸ್ಥಿತಿಯಲ್ಲಿರುವ ದೇವಾಲಯಗಳ ಅಭಿವೃದ್ಧಿಗೆ ಶಾಸಕರು ಹಣ ನೀಡಲಿ: ಮುಜರಾಯಿ ಸಚಿವ

: ಕೆಟ್ಟ ಸ್ಥಿತಿಯಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಯಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಶಾಸಕರು ತಮ್ಮ ಅನುದಾನದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಟ್ಟ ಸ್ಥಿತಿಯಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ  ಆಯಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಶಾಸಕರು ತಮ್ಮ ಅನುದಾನದಲ್ಲಿ ಹಣ ನೀಡಬೇಕೆಂದು ಶಾಸಕರಿಗೆ ಮುಜರಾಯಿ ಸಚಿವ  ರಾಜಶೇಖರ್ ಬಸವರಾಜ್ ಪಾಟೀಲ್ ಪತ್ರ ಬರೆದಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 34 ಸಾವಿರ ದೇವಾಲಯಗಳು ಬರುತ್ತವೆ, ಅದರಲ್ಲಿ ಸುಮಾರು 175 ದೇವಾಲಯಗಳ ವಾರ್ಷಿಕ ಆದಾಯ 25 ಲಕ್ಷಕ್ಕೂ ಅಧಿಕವಾಗಿದೆ, ಇವುಗಳನ್ನು ಎ ವರ್ಗಕ್ಕೆ ಸೇರಿಸಲಾಗಿದೆ,
ಇನ್ನೂ 158 ದೇವಾಲಯಗಳು ಬಿ ಗುಂಪಿಗೆ ಸೇರಿದ್ದು, ಇವುಗಳ ವಾರ್ಷಿಕ ಆದಾಯ 5ರಿಂದ 25 ಲಕ್ಷ ರು ಒಳಗಿದೆ, ಉಳಿದ ಸಿ ಗುಂಪಿನ ದೇವಾಲಯಗಳು  ಉತ್ತಮ ಪರಿಸ್ಥಿತಿಯಲ್ಲಿಲ್ಲ, ಈ ದೇವಾಲಯಗಳಿಗೆ ಸರಿಯಾದ ರಸ್ತೆ, ನೀರು ಹಾಗೂ ಶೌಚಾಲಯಗಳಿಲ್ಲ, ಹೀಗಾಗಿ ಈ ದೇವಾಲಯಗಳಿಗೆ ಬರಲು ಪ್ರವಾಸಿಗರು ಬಯಸುವುದಿಲ್ಲ.
ದೇವಾಸ್ಥಾನಗಳ ಅಭಿವೃದ್ಧಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸುಮಾರು 56 ಕೋಟಿ ಮೀಸಲಿಡಲಾಗಿದೆ ಎಂದು  ಸಚಿವ ಪಾಟೀಲ್ ಹೇಳಿದ್ದಾರೆ, ರಾಜ್ಯದ 224 ಶಾಸಕರು  ತಲಾ 20 ಲಕ್ಷ ನೀಡಿದರೇ ದೇವಾಲಯಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಪಾಟೀಲ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com