'ವರ'ನನ್ನು ಹುಡುಕಿಕೊಡಲು ವಿಫಲವಾದ ಮ್ಯಾಟ್ರಿಮೊನಿ; ಗ್ರಾಹಕನಿಗೆ ಹಣ ವಾಪಸ್ ನೀಡುವಂತೆ ಸೂಚನೆ

ವೈದ್ಯ ವಧುವಿಗೆ ವರನನ್ನು ಹುಡುಕಿಕೊಡಲು ವಿಫಲವಾದ ವಧು-ವರರ ಅನ್ವೇಷಣಾ ಕೇಂದ್ರ ಪರಿಹಾರವಾಗಿ ಹಣ ನೀಡುವಂತೆ ಬೆಂಗಳೂರು ನಗರ ಜಿಲ್ಲೆ ಗ್ರಾಹಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ವೈದ್ಯ ವಧುವಿಗೆ ವರನನ್ನು ಹುಡುಕಿಕೊಡಲು ವಿಫಲವಾದ ವಧು-ವರರ ಅನ್ವೇಷಣಾ ಕೇಂದ್ರ ಪರಿಹಾರವಾಗಿ ಹಣ ನೀಡುವಂತೆ ಬೆಂಗಳೂರು ನಗರ ಜಿಲ್ಲೆ ಗ್ರಾಹಕರ ವಿವಾದ ಪರಿಹಾರ ಪರಿಹಾರ ವೇದಿಕೆ ಸೂಚಿಸಿದೆ.
ಮೈಸೂರಿನ ಶ್ರೀರಾಂಪುರದ ನಿವಾಸಿ, ರಾಮಕೃಷ್ಣ(ಹೆಸರು ಬದಲಾಯಿಸಲಾಗಿದೆ) ಅವರಿಗೆ ಆರು ತಿಂಗಳ ಬಡ್ಡಿ ಹಣ ಹಾಗೂ 5 ಸಾವಿರ ರು ಪರಿಹಾರ ಹಣ ಸೇರಿ ಒಟ್ಟು 55 ಸಾವಿರ ರು ನೀಡುವಂತೆ ಬೆಂಗಳೂರು ನಗರ ಜಿಲ್ಲೆಯ ಗ್ರಾಹಕರ ವಿವಾದ ಪರಿಹಾರ ಪರಿಹಾರ ವೇದಿಕೆಯ ಅಧ್ಯಕ್ಷರಾದ ಎಸ್ ಎಲ್ ಪಾಟೀಲ್ ಹಾಗೂ ಸದಸ್ಯ ಪಿ.ಕೆ ಶಾಂತಾ. ಎಲೈಟ್ ಮ್ಯಾಟ್ರಿಮೋನಿಗೆ ಸೂಚಿಸಿದೆ,.
ತಮ್ಮ ಮಗಳು ಡಾ. ಅನಿತಾ ಅವರಿಗೆ ವರನನ್ನು ಹುಡುಕಿಕೊಡುವಲ್ಲಿ ಎಲೈಟ್ ಮ್ಯಾಟ್ರಿಮೋನಿ.ಕಾಮ್ ವಿಫಲವಾಗಿದೆ ಎಂದು ರಾಮಕೃಷ್ಣ ಅವರು  ಬೆಂಗಳೂರು ನಗರ ಜಿಲ್ಲೆಯ ಗ್ರಾಹಕರ ವಿವಾದ ಪರಿಹಾರ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು. ಜೊತೆಗೆ ರಾಮಕೃಷ್ಣ ಅವರು ಈ ವೆಬ್ ಸೈಟ್ ಗೆ ಏಪ್ರಿಲ್ 26 2018 ರಂದು ಲೀಗಲ್ ನೋಟೀಸ್ ಕೂಡ ಕಳುಹಿಸಿದ್ದರು,
ದೂರುದಾರ ನೀಡಿರುವ ಮಾಹಿತಿ ನೈಜವಾಗಿದ್ದರ ಹಿನ್ನೆಲೆಯಲ್ಲಿ  ವರನ್ವೇಷಣಾ ಕೇಂದ್ರಕ್ಕೆ ಸೇರಲು ನೀಡಿದ್ದ ಶುಲ್ಕಕ್ಕೆ ಬಡ್ಡಿ ಸೇರಿಸಿ 2019ರ ಜನವರಿ 8 ರೊಳಗೆ ಪಾವತಿಸುವಂತೆ ತಿಳಿಸಿದೆ., 
ಎಲೈಟ್ ಮ್ಯಾಟ್ರಿಮೋನಿಯ ಜಾಹೀರಾತು ನೋಡಿದ ರಾಮಕೃಷ್ಣ, ತಮ್ಮ ಮಗಳ ಹೆಸರನ್ನು ನೋಂದಾಯಿಸಿದ್ದರು. ಮೂರು ತಿಂಗಳು ಕಳೆದರೂ ತಮ್ಮ ಮಗಳಿಗೆ ಸೂಕ್ತವಾದ ವರ ಸಿಗಲಿಲ್ಲ, ವೈದ್ಯ ಕೋಸ್ಸ್ ಮುಗಿಸಿರುವ ಯಾವುದೇ ವರ ಸಿಗಲೇ ಇಲ್ಲ. ಹೀಗಾಗಿ ತಮ್ಮ ಹಣ ವಾಪಸ್ ನೀಡುವಂತೆ ಮ್ಯಾಟ್ರಿಮೋನಿಗೆ ಮನವಿ ಮಾಡಿದ್ದರು, ಶುಲ್ಕದ ಹಣವನ್ನು ತಮ್ಮ ಕಾಲಿನ ಶಸ್ತ್ರ ಚಿಕಿತ್ಸೆಗೆ ಬಳಸಬೇಕೆಂದು ಕೇಳಿದ್ದರು, ಆದರೆ ಮ್ಯಾಟ್ರಿಮೋನಿ ಯವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ, ಹೀಗಾಗಿ ರಾಮಕೃಷ್ಣ ಬೆಂಗಳೂರು ನಗರ ಜಿಲ್ಲೆಯ ಗ್ರಾಹಕರ ವಿವಾದ ಪರಿಹಾರ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com