ಮಂಗಳೂರು: ಹೊಸ ವರ್ಷಕ್ಕಾಗಿ ಕೊಂಕಣ ರೈಲ್ವೆಯಿಂದ ವಿಶೇಷ ರೈಲು ಸಂಚಾರ

ಹೊಸ ವರ್ಷಕ್ಕಾಗಿ ಕೊಂಕಣ ರೈಲ್ವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ, ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚುವ ಹಿನ್ನೆಲೆಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ಹೊಸ ವರ್ಷಕ್ಕಾಗಿ ಕೊಂಕಣ ರೈಲ್ವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ, ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚುವ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗವಾಗಿ ಪುಣೆ-ಮುಂಬಯಿ-ತಿವಿಂ-ಕರ್ಮಲಿ-ಮಂಗಳೂರು ನಡುವೆ ವಿಶೇಷ ರೈಲು ಸಂಚರಿಸಲಿದೆ.
ಪುಣೆ ಮಂಗಳೂರು ನಡುವೆ ಸಂಚರಿಸುವ 01301  ಸಂಖ್ಯೆಯ ರೈಲು ಡಿಸೆಂಬರ್ 18.25, ಮತ್ತು ಜನವರಿ 1 ರಂದು ಸಂಜೆ 6.45 ಕ್ಕೆ ಪುಣೆಯಿಂದ ಹೊರಟು ಮಾರನೇ ದಿನದ ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಲಿದೆ.
ರೈಲು ಸಂಖ್ಯೆ 01302 ಮಂಗಳೂರು ಜಂಕ್ಷನ್ ನಿಂದ ವಾರದ ವಿಶೇಷ ದಿನಗಳಲ್ಲಿ ಅಂದರೆ ಡಿಸೆಂಬರ್ 19, 26 ಮತ್ತು ಜನವರಿ 2ರಂದು  ಮಧ್ಯಾಹ್ನ 3.45 ಕ್ಕೆ ಮಂಗಳೂರಿನಿಂದ ಹೊರಡುವ ರೈಲು ಮಾರನೇ ದಿನ 1.10 ನಿಮಿಷಕ್ಕೆ ಪುಣೆ ತಲುಪಲಿದೆ, ಈ ರೈಲುಗಳಲ್ಲಿ ಒಂದು ಎಸಿ ಕೋಚ್, 6 ಸ್ಲೀಪರ್ ಕೋಚ್, 4 ಜನರಲ್ ಕೋಚ್ ಹಾಗೂ ಎರಡು ಎಸ್ ಎಲ್ ಆರ್ ಕೋಚ್ ಗಳಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com