ಮಂಡ್ಯ ಬಸ್ ದುರಂತ: ಪ್ರೇತಾತ್ಮಗಳ ಕಾಟದಿಂದ ತಪ್ಪಿಸಿಕೊಳ್ಳಲು ಹೋಮ-ಹವನ

ಇತ್ತೀಚೆಗೆ ನಡೆದ ಮಂಡ್ಯ ಬಸ್ ದುರಂತ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ದುಷ್ಟ ಶಕ್ತಿಗಳ ಹಾವಳಿ ಉಂಟಾಗಬಹುದೆಂಬ ಭಯದಿಂದ ಘಟನೆ ನಡೆದ ಸ್ಥಳದಲ್ಲಿ ಸಾಂಪ್ರಾದಾಯಿಕ ...
ಮಂಡ್ಯ ಬಸ್ ದುರಂತ (ಸಂಗ್ರಹ ಚಿತ್ರ)
ಮಂಡ್ಯ ಬಸ್ ದುರಂತ (ಸಂಗ್ರಹ ಚಿತ್ರ)
Updated on
ಮಂಡ್ಯ: ಇತ್ತೀಚೆಗೆ ನಡೆದ ಮಂಡ್ಯ ಬಸ್ ದುರಂತ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ದುಷ್ಟ ಶಕ್ತಿಗಳ ಹಾವಳಿ ಉಂಟಾಗಬಹುದೆಂಬ ಭಯದಿಂದ ಘಟನೆ ನಡೆದ ಸ್ಥಳದಲ್ಲಿ ಸಾಂಪ್ರಾದಾಯಿಕ ಆಚರಣೆ ನಡೆಸಲು ಗ್ರಾಮಸ್ಥರು ನಿರ್ದರಿಸಿದ್ದಾರೆ.
ನವೆಂಬರ್ 24 ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕರಗನಮರಡಿ ಗ್ರಾಮದ ವಿಸಿ ನಾಲೆಗೆ ಖಾಸಗಿ ಬಸ್ ಬಿದ್ದು ಸುಮಾರು 30 ಕ್ಕೂ ಹೆಹ್ಚು ಮಂದಿ ಸಾವನ್ನಪ್ಪಿದ್ದರು.
ಸತ್ತವರ ಆತ್ಮ ಪ್ರೇತಗಳಾಗಿ ಕಾಡದೇ, ಗ್ರಾಮಕ್ಕೆ ಯಾವುದೇ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಡಿಸೆಂಬರ್ 21 ರಂದು ಕನಗನಮರಡಿ ಮತ್ತು ವೇದ ಸಮುದ್ರ ಗ್ರಾಮದಲ್ಲಿ  ಶಾಂತಿ ಹೋಮ -ಹವನ ಏರ್ಪಡಿಸಲಾಗಿದೆ. ವಿಶ್ವೇಶ್ವರಯ್ಯ ನಾಲೆಯ ಪಕ್ಕದಲ್ಲಿ ಈ ಆಚರಣೆಗಳು ನಡೆಯಲಿವೆ.
ದುರಂತದಲ್ಲಿ ಸತ್ತ ಮನುಷ್ಯರ ಆತ್ಮಗಳು ಘಟನೆ ನಡೆದ ಸ್ಥಳದಲ್ಲೇ ಇರುತ್ತವೆ , ಹೀಗಾಗಿ ಅವರಿಗೆ ಮುಕ್ತಿ ನೀಡಲು ಪೂಜೆಯ ಅವಶ್ಯಕತೆಯಿದೆ ಎಂದು ಇಲ್ಲಿನ ಜನ ನಂಬಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com