ಸಿದ್ದರಾಮಯ್ಯ ವಿರುದ್ಧದ ಭೂ ಅಕ್ರಮ ವರ್ಗಾವಣೆ ಕೇಸ್: ಪೊಲೀಸರಿಂದ ಅಂತಿಮ ವರದಿ ಸಲ್ಲಿಕೆ

ಮುಡಾ ನಿಯಮಗಳನ್ನು ಗಾರಿಗೆ ತೂರಿ ಅಕ್ರಮವಾಗಿ ಭೂಮಿಯನ್ನು ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಅಂತಿಮ ವರದಿ ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಮೈಸೂರು:  ಮುಡಾ ನಿಯಮಗಳನ್ನು ಗಾರಿಗೆ ತೂರಿ ಅಕ್ರಮವಾಗಿ ಭೂಮಿಯನ್ನು ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದಾರೆ.ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ಕೋರ್ಟ್ ಗೆ ಸಲ್ಲಿಸಲಾಗಿದೆ.
ಮಾಜಿ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ವಿರುದ್ಜ ಎಫ್ ಐ ಆರ್ ದಾಖಲಿಸುವಂತೆ ಕೋರ್ಟ್ ಆದೇಶಿಸಿತ್ತು, ಆ ಹಿನ್ನೆಲೆಯಲ್ಲಿ ಮಾಜಿ ಸಿಎಂ ವಿರುದ್ಧ ಎಫ್ ಐ ಆರ್ ದಾಖಲಿಸುವ ಸಾಧ್ಯತೆಯಿದೆ.
ಈ ಸಂಬಂಧ ತಾವೂ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ದೂರುದಾರರು ತಿಳಿಸಿದ್ದಾರೆ,
ತನಿಖೆಯ ಪ್ರಕಾರ ಕೆಲವು ತಪ್ಪುಗಳಾಗಿರುವುದು ಕಂಡು ಬಂದಿತ್ತು, ಈ ವರದಿಯನ್ನು ಕೋರ್ಟ್ ಗೆ ನವೆಂಬರ್ ನಲ್ಲಿ ಸಲ್ಲಿಸಲಾಗಿತ್ತು. ಆದರೆ ಈಗ ತನಿಖೆ ನಡೆದು ಸಲ್ಲಿಸಿರುವ ವರದಿ ಬಗ್ಗೆ ನಾವು ಏನನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.
ತನಿಖೆ ವಿಳಂಬವಾಗುತ್ತಿದ್ದವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಜಿ,. ಗಂಗರಾಜು ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದ್ದರು. ಪ್ರಕರಣವನ್ನು ತನಿಖಾ ಏಜೆನ್ಸಿ ಅಥವಾ ಡಿಸಿಪಿ ಮಟ್ಟದ ಅಧಿಕಾರಿಗಳು ನಡೆಸುವಂತೆ ಮನವಿ ಮಾಡಿದ್ದರು. ನ್ಯಾಯಸಿಗುವವರೆಗೂ ತಾವು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com