ಪಂಚರಾಜ್ಯ ಫಲಿತಾಂಶ ಮೋದಿಗೆ ಎಚ್ಚರಿಕೆಯ ಕರೆಗಂಟೆ: ಪೇಜಾವರ ಶ್ರೀ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪೇಜಾವರ ಶ್ರೀ
ಪೇಜಾವರ ಶ್ರೀ
ಉಡುಪಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಶ್ರೀಗಳು "ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡುಉ ದೇಶದ ಆರ್ಥಿಕ ಸುಧಾರಣೆ ಘಾಗೂ ರಾಮಮಂದಿರ ನಿರ್ಮಾಣಕ್ಕೆ ಮೋದಿ ಗಮನ ಹರಿಸಬೇಕಿದೆ." ಎಂದಿದ್ದಾರೆ.
"ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗು ಬಡಿಯಲು ಪಣದೊಟ್ಟಿದ್ದಾರೆ. ಅವರ ವಿರೋಧ ಕಟ್ಟಿಕೊಳ್ಳುವುದು ಬಿಜೆಪಿಗೆ ಒಳಿತಲ್ಲ. ಮೋದಿ ವಾಜಪೇಯಿ ಅವರ ಮಾರ್ಗ ಅನುಸರಿಸಬೇಕಿದೆ. ಮೋದಿ ಇದಾಗಲೇ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರೂ ಸಹ ಜನರ ವಿಶ್ವಾಸ ಮೊದಲಿನಂತೆಯೇ ಉಳಿದಿಲ್ಲ.
"ಸಮಾನ ಮನಸ್ಕ ಪಕ್ಷಗಳೊಡನೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬೇಕು: ಎಂದ ಪೇಜಾವರ ಶ್ರೀಗಳು "ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿಯಷ್ಟು ಸಮರ್ಥರಲ್ಲ, ಅವರು ಪ್ರಧಾನಿ ಅಭ್ಯರ್ಥಿಯಾಗಬಾರದು" ಎಂದಿದ್ದಾರೆ. ಆದರೆ ಅದೇ ವೇಳೆ ರಾಜಕಾರಣಿಯಲ್ಲದ ಸಂತ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಮಾಡಿರುವುದೇನೂ ಕಡಿಮೆ ಸಾಧನೆ ಅಲ್ಲ ಎಂದೂ ಅವರು ಹೇಳಿದ್ದಾರೆ.
ಕೃಷ್ಣಮಠದಲ್ಲಿ ಎಡೆಸ್ನಾನ, ಮಡೆಸ್ನಾನ ರದ್ದು
ಉಡುಪಿ ಕೃಷ್ಣಮಠದಲ್ಲಿ ಷಷ್ಟಿ ಆಚರಣೆ ವೇಳೆ ಎಡೆಸ್ನಾನ ಹಾಗೂ ಮಡೆಸ್ನಾನಕ್ಕೆ ಅವಕಾಶವಿಲ್ಲ ಎಂದು ಪರ್ಯಾಯ  ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣಮಠದಲ್ಲಿ ಹಲವು ವರ್ಷಗಳಿಂದ ಷಷ್ಟಿ ಆಚರೆಅಣೆ ವೇಳೆ ಡೆಸ್ನಾನ, ಮಡೆಸ್ನಾನ ನಡೆಯುತ್ತಿತ್ತು. ಆದರೆ ಈ ಬಾರಿ ಈ ಆಚರಣೆಗೆ ಶ್ರೀಗಳು ಅವಕಾಶ ನೀಡಿಲ್ಲ. ಇದರ ಬದಲಿಗೆ ಆಸಕ್ತ ಭಕ್ತರು ಉರುಳು ಸೇವೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com