30 ಸೆಕೆಂಡುಗಳಲ್ಲಿ ಕಾಫಿ! ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿಂದ ಹೊಸ ಉತ್ಪನ್ನ ಬಿಡುಗಡೆ

ನೀವೇನಾದರೂ ಕಾಫಿ ಪ್ರಿಯರಾಗಿದ್ದರೆ ನಿಮಗೊಂದು ಒಳ್ಳೆ ಸುದ್ದಿ ಇದೆ. ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಕೇವಲ 30 ಸೆಕೆಂಡ್ ನಲ್ಲಿ ಕಾಫಿ...
ಕಾಫಿ ಕ್ಯೂಬ್
ಕಾಫಿ ಕ್ಯೂಬ್
ಮೈಸೂರು: ನೀವೇನಾದರೂ ಕಾಫಿ ಪ್ರಿಯರಾಗಿದ್ದರೆ ನಿಮಗೊಂದು ಒಳ್ಳೆ ಸುದ್ದಿ ಇದೆ. ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಕೇವಲ 30 ಸೆಕೆಂಡ್ ನಲ್ಲಿ ಕಾಫಿ ತಯಾರಿಸಬಹುದಾದ ವಿನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಸಂಸ್ಥೆಯು ಕಾಫಿ ಕ್ಯೂಬ್ ಗಳನ್ನು ಅಭಿವೃದ್ದಿಪಡಿಸಿದ್ದು ಇದನ್ನು ಹಾಲು ಅಥವಾ ನೀರಿನಲ್ಲಿ (ಬಿಸಿ ಅಥವಾ ಶೀತಲ) ಬೆರೆಸಿದ ಕೆಲವೇ ಸೆಕೆಂಡ್ ಗಳಲ್ಲಿ ನಿಮ್ಮಿಷ್ಟದ ಕಾಫಿ ತಯಾರಾಗುತ್ತದೆ.
ಸಂಸ್ಥೆಯ ಕ್ಯಾಂಪಸ್ ನಲ್ಲಿ ಗುರುವಾರ ಎಂಟನೇ ಅಂತರಾಷ್ಟ್ರೀಯ ಫುಡ್ ಕನ್ವೆನ್ಷನ್ 2018 ನಡೆದಿದ್ದು ಈ ಸಂದರ್ಭ ಹಮ್ಮಿಕೊಳ್ಳಲಾಗಿದ್ದ  'ಫುಡ್ ಟೆಕ್ ಎಕ್ಸ್ಪೋ' ಅಂಗವಾಗಿ ಸ್ಥಾಪಿತವಾಗಿದ್ದ ಮಳಿಗೆಯಲ್ಲಿ ಈ ವಿನೂತನ ಉತ್ಪನ್ನವನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
"ಇದು ತ್ವರಿತವಾಗಿ ಕರಗಬಲ್ಲ ಕಾಫಿ ಕ್ಯೂಬ್ ಆಗಿದೆ. ಇದು ಸಾಮಾನ್ಯ ಕಾಫಿ ಸ್ವಾದ, ಪರಿಮಲವನ್ನೇ ಹೊಂದಿರುವುದಲ್ಲದೆ ಆರೋಗ್ಯಕ್ಕೆ ಉತ್ತಮವಾದ ಹಸಿರು ಕಾಫಿ (ಗ್ರೀನ್ ಕಾಫಿ) ಸಾರವನ್ನೂ ಒಳಗೊಂಡಿದೆ" ಎಂದು ಸಿಎಫ್ಟಿಆರ್ಐ ಹಿರಿಯ ವಿಜ್ಞಾನಿ ಡಾ. ಪುಷ್ಪಾ ಮೂರ್ತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com