ಕೋಲಾರ: ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪಕ, ಧರ್ಮಾಧಿಕಾರಿ ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಲಿಂಗೈಕ್ಯ

ಪ್ರಸಿದ್ಧ ಧಾರ್ಮಿಕ ಕೇಂದ್ರ ಕೋಟಿಲಿಂಗೇಶ್ವರ ಸ್ವಾಮಿ ದೇವಾಲಯದ ಸ್ಥಾಪಕ ಹಾಗೂ ಧರ್ಮಾಧಿಕಾರಿ ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.
ಸಾಂಬಾ ಶಿವ ಮೂರ್ತಿ ಸ್ವಾಮೀಜಿ
ಸಾಂಬಾ ಶಿವ ಮೂರ್ತಿ ಸ್ವಾಮೀಜಿ

ಕೋಲಾರ: ಪ್ರಸಿದ್ಧ ಧಾರ್ಮಿಕ ಕೇಂದ್ರ ಕೋಟಿಲಿಂಗೇಶ್ವರ ಸ್ವಾಮಿ ದೇವಾಲಯದ ಸ್ಥಾಪಕ   ಹಾಗೂ ಧರ್ಮಾಧಿಕಾರಿ ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ದಾಖಲಾಗಿದ್ದ ಸ್ವಾಮೀಜಿ ಶುಕ್ರವಾರ ಸಂಜೆ ನಿಧನರಾಗಿದ್ದಾರೆ

ಕೋಮಾ ಸ್ಥಿತಿಗೆ ತಲುಪಿದ  ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಬದುಕಿಸುವ ನಿಟ್ಟಿನಲ್ಲಿ ವೈದ್ಯರು ನಡೆಸಿದ ಪ್ರಯತ್ನ ವಿಫಲವಾಯಿತು. ಸ್ವಾಮೀಜಿ ಹುಟ್ಟೂರು ಕಾಮಸಂದ್ರದಲ್ಲಿ ಶನಿವಾರ ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ

ಕೆಜಿಎಫ್ -ಬೆತಮಂಗಲ ಮುಖ್ಯರಸ್ತೆಯಲ್ಲಿರುವ ಪ್ರಸಿಧ್ದ ಧಾರ್ಮಿಕ ಕ್ಷೇತ್ರ ಕೋಟಿಲಿಂಗೇಶ್ವರ ಸ್ವಾಮೀ ದೇವಾಲಯವನ್ನು ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಸ್ಥಾಪಿಸಿದ್ದರು. ಅಲ್ಲದೇ, ದೇವಾಲಯದ ಆವರಣದಲ್ಲಿ 108 ಅಡಿ ಎತ್ತರದ ಶಿವ ದೇವಾಲಯ ಹಾಗೂ ನಂದಿ ಮೂರ್ತಿ ಸ್ಥಾಪಿಸಿದ್ದರು. ಪ್ರತಿದಿನ ಸಾವಿರಾರು ಭಕ್ತಾಧಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಸ್ವಾಮೀಜಿಗೆ ಅಂತಿಮ ನಮನ ಸಲ್ಲಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇಂದು ಆಗಮಿಸುವ ಸಾಧ್ಯತೆ ಇರುವುದರಿಂದ ಸಂಚಾರ ದಟ್ಟಣೆ ನಿಯಂತ್ರಿಸಲು   ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com