ಪತ್ರಕರ್ತ ರವಿ ಬೆಳಗೆರೆ ವಿರುದ್ಧದ ಎಲ್ಲಾ ವಿಚಾರಣೆಗಳಿಗೂ ಹೈಕೋರ್ಟ್ ತಡೆ

ಹಾಯ್ ಬೆಂಗಳೂರು ವಾರ ಪತ್ರಿಕೆ ಸಂಪಾದಕ ರವಿಬೆಳಗೆರೆ ವಿರುದ್ಧದ ಎಲ್ಲಾ ಕ್ರಿಮಿನಲ್ ವಿಚಾರಣೆಗಳಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ರವಿ ಬೆಳಗೆರೆ
ರವಿ ಬೆಳಗೆರೆ
ಬೆಂಗಳೂರು:  ಹಾಯ್ ಬೆಂಗಳೂರು ವಾರ ಪತ್ರಿಕೆ ಸಂಪಾದಕ ರವಿಬೆಳಗೆರೆ  ವಿರುದ್ಧದ ಎಲ್ಲಾ ಕ್ರಿಮಿನಲ್ ವಿಚಾರಣೆಗಳಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ವೈಯಕ್ತಿಕ ಕಾರಣಕ್ಕಾಗಿ ತಮ್ಮ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಫಾರಿ ನೀಡಿದ್ದರ ಹಿನ್ನೆಲೆಯಲ್ಲಿ ರವಿ ಬೆಳಗೆರೆ ವಿರುದ್ಧ ಕೇಸ್ ದಾಖಾಲಗಿತ್ತು,
ರವಿ ಬೆಳಗೆರೆ ವಿರುದ್ಧದ ಎಲ್ಲಾ ವಿಚಾರಣೆಗಳನ್ನು ನಿಲ್ಲಿಸುವಂತೆ ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಆದೇಶಿಸಿದ್ದಾರೆ.ಅಧೀನ ನ್ಯಾಯಾಲಯದಲ್ಲಿ ನಡೆಯುತ್ತೀರುವ ಮೊಕದ್ದಮೆ ರದ್ದು ಕೋರಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಡಿಸೆಂಬರ್ 7ರಂದು ನ್ಯಾಯಾಲಯ ಈ ಆದೇಶ ಹೊರಡಿಸಿದೆ. ರವಿ ಬೆಳಗೆರೆ ವಿರುದ್ಧ ತನಿಖೆ ಹಾಗೂ ಚಾರ್ಜ್ ಶೀಟ್ ಸಲ್ಲಿಸಲು ಸಿಸಿಬಿ ಪೊಲೀಸರಿಗೆ ಅಧಿಕಾರವಿಲ್ಲ ಎಂದು ಬೆಳಗೆರೆ ಪರ ವಕೀಲರು ವಾದ ಮಂಡಿಸಿದ್ದಾರೆ. ಕೇವಲ ನ್ಯಾಯಾಂಗ ವ್ಯಾಪ್ತಿಯ ಪೊಲೀಸರಿಗೆ ಮಾತ್ರ ಆ ಅಧಿಕಾರವಿದೆ ಎಂದು ವಾದ ಮಂಡಿಸಿದರು,
ಪ್ರಕರಣವೂ ಕಾನೂನು ಬಾಹಿರ, ಅಸಮಂಜಸ ಹಾಗೂ ಸಾಕ್ಷ್ಯಾಧಾರ ಕೊರತೆಯಿಂದ ಕೂಡಿದೆ ಎಂದು ರವಿ ಬೆಳಗೆರೆ ಮನವಿ ಮಾಡಿದ್ದರು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com