
ಬೆಳಗಾವಿ: ರೈತರಿಗೆ ಬೀಜಗಳು ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡಲು ಕಾನೂನಿನ ಪ್ರಕಾರ ಪರವಾನಗಿ ಇರುವವರಿಗೆ ಮಾತ್ರ ಅವಕಾಶ ನೀಡಬೇಕು, ಬೇರೆ ಯಾವುದೇ ವ್ಯಾಪಾರಿಗಳಿಗೆ ಅನುಮತಿ ನೀಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿ ಸುವರ್ಣ ವಿಧಾನಸೌಧ ಬಳಿ ರಾಜ್ಯ ಕೃಷಿ ಪರಿಕರ ಮಾರಾಟಗಾರರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 50ಸಾವಿರಕ್ಕೂ ಹೆಚ್ಚು ಮಾರಾಟಗಾರರು ಕಾನೂನು ಪ್ರಕಾರ ಪರವಾನಗಿ ಹೊಂದಿದ್ದು, ರೈತರಿಗೆ ಬೀಜ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ. ರಾಜ್ಯಾದ್ಯಂತ ಸುಮಾರು 6 ಲಕ್ಷ ಜನರು ಅಕ್ರಮವಾಗಿ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಅಂತಹವರಿಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳು ಮತ್ತು ಸಲಕರಣೆಗಳನ್ನು ನಿರ್ವಹಿಸುವ ವ್ಯಾಪಾರಿಗಳಿಗಾಗಿ ಇರುವ ವೆಬ್ ಸೈಟ್ ನಲ್ಲಿನ ಆನ್ ಲೈನ್ ಸೇವೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
Advertisement