ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಸಮಿತಿ ರಚನೆ ಆದೇಶಕ್ಕಾಗಿ ಹೈಕೋರ್ಟ್ ಗೆ ಪಿಐಎಲ್

ರಾಜ್ಯಾದ್ಯಂತ ಸಾರ್ವಜನಿಕ ಶೌಚಾಲಯ ನಿರ್ಮಾಣ ಹಾಗು ನಿರ್ವಹಣೆಗಾಗಿ ಒಂದು ಆಡಳಿತ ಮಂಡಳಿಯನ್ನು ರಚಿಸಬೇಕೆಂದು ನಿರ್ದೇಶಿಸಲು ಕೋರಿ ಆಂಟಿ ಕರಪ್ಷನ್....
ಬೆಂಗಳೂರು: ರಾಜ್ಯಾದ್ಯಂತ ಸಾರ್ವಜನಿಕ ಶೌಚಾಲಯ ನಿರ್ಮಾಣ ಹಾಗು ನಿರ್ವಹಣೆಗಾಗಿ ಒಂದು ಆಡಳಿತ ಮಂಡಳಿಯನ್ನು ರಚಿಸಬೇಕೆಂದು ನಿರ್ದೇಶಿಸಲು ಕೋರಿ ಆಂಟಿ ಕರಪ್ಷನ್ ಕೌನ್ಸ್ಲಿ ಆಫ್ ಇಂಡಿಯಾ (ಎಸಿಸಿಐ) ಬುಧವಾರ ಹೈಕೋರ್ಟ್ ಮೊರೆ ಹೋಗಿದೆ.
ಈ ಸಂಬಂಧ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿರುವ ಎನ್ ಜಿಓಮುಖ್ಯಸ್ಥ ಹುಸೇನ್ ಮೊಯೀನ್ ಫಾರೂಕ್ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಸುಜಾತಾ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು  ಜನವರಿ 30, 2019 ಕ್ಕೆಕೈಗೊಳ್ಳುವುದಾಗಿ ಹೇಳಿದೆ.
ಸಾರ್ವಜನಿಕ ಶೌಚಾಲಯಕ್ಕೆ ಸಬಂಧಿಸಿದಂತೆ ನವೆಂಬರ್ 2, 2018 ರಂದು ಪತ್ರಿಕೆಯಲ್ಲಿ ಬಂದ ವರದಿಯನ್ನೂ ಸೇರಿ ವಿವಿದ್ಗ ಮಾದ್ಯಮಗಳ ವರದಿಯನ್ನು ಉಲ್ಲೇಖಿಸಿ ಅರ್ಜಿದಾರರು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸಾರ್ವಜನಿಕ ಶೌಚಾಲಯಗಳ ಗುಣಮಟ್ಟದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಶೌಚಾಲಯಕ್ಕೆ ಸರಿಯಾದ ಬಾಗಿಲುಗಳಿಲ್ಲ, ದೋಷಯುಕ್ತವಾದ ಫ್ಲಶ್ ಗಳು, , ನೀರಿನ ಸರಬರಾಜು ಕೊರತೆ, ಕಳಪೆ ಮೂಲಭೂತ ಸೌಕರ್ಯ ಮತ್ತು ಕಸದ ಸಮಸ್ಯೆ ಸೇರಿದಂತೆ ಶೌಚಾಲಯಗಳ ಹದಗೆಡುತ್ತಿರುವ ಪರಿಸ್ಥಿತಿಗಳ ಕುರಿತು ಅರ್ಜಿಯಲ್ಲಿ ವಿವರಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com