ಉತ್ತರ ಕರ್ನಾಟಕಕ್ಕೆ ನವಚೈತನ್ಯ: 9 ಸರ್ಕಾರಿ ಕಛೇರಿಗಳ ಸ್ಥಳಾಂತರಕ್ಕೆ ಸಂಪುಟ ಅಸ್ತು

ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಳಿಸಲು ಹಾಗೂ ಆ ಭಾಗದ ದ ಮುಖಂಡರು ಮತ್ತು ಜನರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಳಿಸಲು ಹಾಗೂ ಆ ಭಾಗದ ದ ಮುಖಂಡರು ಮತ್ತು ಜನರ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸರ್ಕಾರದ ಕೆಲವು ಪ್ರಮುಖ ಇಲಾಖೆಗಳನ್ನು ರಾಜಧಾನಿ ಬೆಂಗಳೂರಿನಿಂದ ಕುಂದಾನಗರಿ ಬೆಳಗಾವಿಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ.
ಬುಧವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೃಷ್ಣ ಜಲ ಭಾಗ್ಯ ನಿಯಮ, ಕರ್ನಾಟಕ ನೀರಾವರಿ ನಿಗಮ, ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಸಕ್ಕರೆ ನಿರ್ದೇಶನಾಲಯ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿಭಜನೆ ಹಾಗೂ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಮಂಡಳಿ, ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ, ಮಾನವ ಹಕ್ಕುಗಳ ಆಯೋಗದ ಒಬ್ಬ ಸದಸ್ಯರ ಕಛೇರಿ, ಮಾಹಿತಿ ಹಕ್ಕು ಆಯೋಗದ ಇಬ್ಬರು ಆಯುಕ್ತರ ಕಛೇರಿ ಕಲಬುರ್ಗಿ, ಬೆಳಗಾವಿಯಲ್ಲಿ ಸ್ಥಾಪಸಿ, ಒಂದು ಉಪ ಲೋಕಾಯುಕ್ತ ಕಛೇರಿ ಸೇರಿ ಒಟ್ಟು 9 ಸರ್ಕಾರಿ ಕಛೇರಿಗಳು ಬೆಳಗಾವಿಉಗೆ ವರ್ಗಾವಣೆ ಆಗಲಿದೆ.
ಗುರುವಾರ ಮಡೆಯಲಿರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಈ ಕುರಿತಂತೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ. ಇನ್ನು ಎಲ್ಲಾ ಕಛೇರಿಗಳನ್ನು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವುದೇ ಅಥವಾ ಉತ್ತರ ಕರ್ನಾಟಕದ ಇನ್ನಿತರೆ ಜಿಲ್ಲೆಗಳಿಗೆ ಸ್ಥಳಾಂತರ ಆಗುವುದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಸುವರ್ಣ ವಿಧಾನಸೌಧದ ಸಂರಕ್ಷಕರಾಗಿರುವ ವಿಧಾನಸಭೆಯ ಸ್ಪೀಕರ್ ಜತೆ ಸಂವಾದ ನಡೆಸಿ ಈ ಸಂಬಂಧ ನಿರ್ಧರಿಸಲಾಗುತ್ತದೆ.
ಬೆಳಗಾವಿ ಸುವರ್ಣ ಸೌಧ ನಿರ್ಮಾಣ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳುಉತ್ತರ ಕರ್ನಾಟಕದ 13 ಜಿಲ್ಲೆಗಳ ನಾಯಕರು, ಹಲವು ಸಂಘಟನೆಗ ಸರ್ಕಾರಕ್ಕೆ ಈ ಸಂಬಂಧ ಒತ್ತಡ ಹೇರಿದ್ದವು. ಆದರೆ ಈ ಹಿಂದಿನ ಸರ್ಕಾರಗಳು ಈ ಕ್ರಮದ ಜಾರಿಗೆ ವಿಫಲವಾಗಿದ್ದವು. ಇತ್ತೀಚಿನ ತಿಂಗಳುಗಳಲ್ಲಿ, ಉತ್ತರ ಕರ್ನಾಟಕ ವಿಕಾಸ್ ವೇದಿಕೆಯ ಅಡಿಯಲ್ಲಿ ಹಲವು ಸಂಘಟನೆಗಳು ಮುಖ್ಯಮಂತ್ರಿಗಳು ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸುವರ್ಣ ವಿಧಾನಸೌಧದ ಮುಂದೆ ಅನಿರ್ದಿಷ್ಟ ಚಳವಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com