ಬೆಂಗಳೂರು- ಮೈಸೂರು ಹೆದ್ದಾರಿ ವಿಸ್ತರಣೆ ಕಾಮಗಾರಿ 2021ರೊಳಗೆ ಮುಕ್ತಾಯ, ಟೋಲ್ ಸಂಗ್ರಹ

ಬಹು ನಿರೀಕ್ಷಿತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಂದಿನ ತಿಂಗಳಿನಿಂದ ಆರಂಭವಾಗಲಿದ್ದು, 2021ರೊಳಗೆ ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಹು ನಿರೀಕ್ಷಿತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ  ಮುಂದಿನ ತಿಂಗಳಿನಿಂದ ಆರಂಭವಾಗಲಿದ್ದು, 2021ರೊಳಗೆ ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. 90 ನಿಮಿಷಗಳಲ್ಲಿ ಸಂಚರಿಸಬಹುದಾದ ಈ ರಸ್ತೆಯಲ್ಲಿ ಟೋಲ್  ಶುಲ್ಕ ಸಂಗ್ರಹಿಸಲಾಗುತ್ತದೆ.

ಮೈಸೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೇಗೇರಿಸುವುದಾಗಿ ಕೇಂದ್ರ ಸಾರಿಗೆ ಸಚಿವರು 2014 ಮಾರ್ಚ್ ತಿಂಗಳು ಘೋಷಣೆ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿಯನ್ನು ಆರುಪಥದ ಎಕ್ಸ್ ಪ್ರೆಸ್ ಸೇರಿದಂತೆ ಒಟ್ಟಾರೇ  10 ಪಥದ ಹೆದ್ದಾರಿಯನ್ನಾಗಿ ಪರಿವರ್ತಿಸುತ್ತಿದೆ.

 ಬೆಂಗಳೂರಿನ ನೈಸ್ ರಸ್ತೆಯಿಂದ ಮೈಸೂರಿನ ರಿಂಗ್ ರಸ್ತೆಯವರೆಗೂ 117 ಕಿ. ಮೀ. ದೂರದವರೆಗೂ ಸುಮಾರು 4.100 ಕೋಟಿ ವೆಚ್ಚದಲ್ಲಿ ಮೇಲ್ದರ್ಜೇಗೆರಿಸಲಾಗುತ್ತಿದೆ. ಬಿಡದಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಮೂಲಕ ಈ ಯೋಜನೆ ಸಾಗಲಿದೆ.

ಈ ಯೋಜನೆಯಡಿ ಕೇಂದ್ರಸರ್ಕಾರ ಶೇ. 40 ರಷ್ಟು ಅಂದರೆ 1.640 ಕೋಟಿ ವೆಚ್ಚ ಮಾಡುತ್ತಿದ್ದರೆ,  ಉಳಿದ 2460 ಕೋಟಿ ಹಣವನ್ನು ಬಿಡ್ಡರ್ ಭರಿಸಲಿದ್ದಾರೆ. ಬಿಡ್ಡರ್  ಬ್ಯಾಂಕುಗಳಿಂದ ಶೇ, 70 ರಷ್ಟು ಸಾಲ ಪಡೆದುಕೊಳ್ಳಬಹುದಾಗಿದ್ದು,  ಅದನ್ನು 30 ಕಂತುಗಳಲ್ಲಿ  ಕೇಂದ್ರ ಸರ್ಕಾರ ಪಾವತಿಸಲಿದೆ.

ಜನವರಿ 8 ರಿಂದ ಕಾಮಗಾರಿ ಆರಂಭಿಸುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆದಾಗ್ಯೂ, ಈ ಮಾತು ನಂಬುವಂತಿಲ್ಲ, ಕಾಮಗಾರಿ ಆರಂಭವಾದ ದಿನದಿಂದ ಮುಕ್ತಾಯವಾಗಲು 30 ತಿಂಗಳು ಬೇಕಾಗುತ್ತದೆ. ಇನ್ನೂ ಶೇ, 85 ರಷ್ಟಕ್ಕೂ ಹೆಚ್ಚಿನ ಭೂಮಿಯ ಅಗತ್ಯವಿದ್ದು, 2021ರೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಾಮಗಾರಿ ಪೂರ್ಣಗೊಂಡ ಬಳಿಕ ಟೋಲ್ ಶುಲ್ಕ ವಿಧಿಸಲಾಗುವುದು , ಇದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ಪಥದ ರಸ್ತೆಯನ್ನು 10 ಪಥಗಳಾಗಿ ಪರಿವರ್ತಿಸಲಾಗುತ್ತಿದ್ದು, ನೈಸ್ ರಸ್ತೆ  ಜಂಕ್ಷನ್ ಬಳಿಯ ಪಂಚಮುಖಿ ದೇವಾಲಯದಿಂದ ಕ್ರೈಸ್ಟ್  ವಿವಿಯವರೆಗೂ  ಆರು ಪಥದ ಎತ್ತರಿಸಿದ ಕಾರಿಡಾರ್ ನಿರ್ಮಾಣ ನಿರ್ಮಾಣ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com