ಡಿ.28 ರಿಂದ 30 ವರೆಗೆ ಇಂದಿರಾನಗರ-ಎಂಜಿ ರಸ್ತೆ ಮೆಟ್ರೋ ಮಾರ್ಗ ಸ್ಥಗಿತ

ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯ ವೇಗವನ್ನು ಹೆಚ್ಚಿಸಲು ಇಂದಿರಾ ನಗರ-ಮಹಾತ್ಮಾ ಗಾಂಧಿ ರಸ್ತೆ ವರೆಗಿನ ಮೆಟ್ರೋ ಸಂಚಾರವನ್ನು ಡಿ.28-30 ವರೆಗೆ ಸ್ಥಗಿತಗೊಳಿಸಲು ಬಿಎಂಆರ್
ಡಿ.28-30 ವರೆಗೆ ಇಂದಿರಾನಗರ ಎಂಜಿ ರಸ್ತೆ ಮೆಟ್ರೋ ಮಾರ್ಗ ಸ್ಥಗಿತ
ಡಿ.28-30 ವರೆಗೆ ಇಂದಿರಾನಗರ ಎಂಜಿ ರಸ್ತೆ ಮೆಟ್ರೋ ಮಾರ್ಗ ಸ್ಥಗಿತ
Updated on
ಬೆಂಗಳೂರು: ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಯ ವೇಗವನ್ನು ಹೆಚ್ಚಿಸಲು  ಇಂದಿರಾ ನಗರ-ಮಹಾತ್ಮಾ ಗಾಂಧಿ ರಸ್ತೆ ವರೆಗಿನ ಮೆಟ್ರೋ ಸಂಚಾರವನ್ನು ಡಿ.28-30 ವರೆಗೆ ಸ್ಥಗಿತಗೊಳಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. 
ಡಿ.28 ರಂದು ರಾತ್ರಿ 8ರಿಂದ ಇಂದಿರಾ ನಗರದಿಂದ ಎಂಜಿ ರಸ್ತೆವರೆಗಿನ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದ್ದು ಡಿ.31 ರಂದು ಬೆಳಿಗ್ಗೆ 5 ರಿಂದ ಈ ಮಾರ್ಗದಲ್ಲಿ ಎಂದಿನಂತೆ ಸಂಚಾರ ಪ್ರಾರಂಭವಾಗಲಿದೆ. ಉಳಿದಂತೆ ಮೈಸೂರು ರಸ್ತೆಯಿಂದ ಎಂಜಿ ರಸ್ತೆ ವರೆಗೆ ಹಾಗೂ ಇಂದಿರಾನಗರದಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣವರೆಗೆ ಯಥಾಸ್ಥಿತಿಯಲ್ಲಿರಲಿವೆ. 
ಡಿ.28 ರಂದು  ಸಂಜೆ 7:30 ಕ್ಕೆ ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿಗೆ ಹಾಗೂ 7:45 ಕ್ಕಿಂತ ಮುನ್ನ ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ತೆರಳಲಿರುವ ರೈಲು ಕೊನೆಯ ರೈಲುಗಳಾಗಿರಲಿವೆ. ಡಿ.28 ರಂದು ಬೈಯ್ಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸುವ  ಎಂಜಿ ರಸ್ತೆಯಿಂದ ಮುಂದಿನ ಹಂತದ ನಿಲ್ದಾಣಗಳಿಗೆ ಸಂಜೆ 6:45 ನಂತರ ನೀಡಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com