ಮಲ್ಪೆ ಬಂದರು (ಸಂಗ್ರಹ ಚಿತ್ರ)
ರಾಜ್ಯ
ಉಡುಪಿ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮೀನುಗಾರರು ನಾಪತ್ತೆ
ಆಳ ಸಮುದ್ರ ಮೀನುಗಾರಿಕೆಗಾಗಿ ಮಲ್ಪೆ ಬಂದರಿನಿಂದ ತೆರಳಿದ್ದ ಒಟ್ಟು ಎಂಟು ಮೀನುಗಾರರು ಕಳೆದ ಎಂಟು ದಿನಗಳಿಂದ ದೋಣಿಗಳ ಸಮೇತ ನಾಪತ್ತೆಯಾಗಿದ್ದಾರೆ.
ಉಡುಪಿ: ಆಳ ಸಮುದ್ರ ಮೀನುಗಾರಿಕೆಗಾಗಿ ಮಲ್ಪೆ ಬಂದರಿನಿಂದ ತೆರಳಿದ್ದ ಒಟ್ಟು ಎಂಟು ಮೀನುಗಾರರು ಕಳೆದ ಎಂಟು ದಿನಗಳಿಂದ ದೋಣಿಗಳ ಸಮೇತ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರನ್ನು ದೋಣಿ ಮಾಲೀಕ ಬಡನಿಡಿಯೂರು ಚಂದ್ರಶೇಖರ್, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್ ಹಾಗೂ ಜೋಗೀಶ್ ಎಂದು ಗುರುತಿಸಲಾಗಿದೆ.
ಈ ಎಲ್ಲರೂ ಡಿಸೆಂಬರ್ 13ರಂದು ಮಲ್ಪೆ ಬಂದರಿನಿಂದ ರಾತ್ರಿ 11 ಗಂಟೆಗೆ ಸುವರ್ಣತ್ರಿಭುಜ ಎಂಬ ಹೆಸರಿನ ದೋಣಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದಾರೆ. ಅವರು ಡಿಸೆಂಬರ್ 15ರ ಮಧ್ಯರಾತ್ರಿವರೀಗೆ ಕುಟುಂಬ ಸದಸ್ಯರೊಡನೆ ಸಂಪರ್ಕದಲ್ಲಿದ್ದರು ಆದರೆ ಆ ನಂತರದಲ್ಲಿ ಸಂಪರ್ಕ ಕಡಿತವಾಗಿದ್ದು ಇದುವರೆಗೆ ಅವರ ಗುರುತು ಪತ್ತೆಯಾಗಿಲ್ಲ.ದೋಣಿಯಲ್ಲಿದ್ದ ಜಿಪಿಎಸ್ ಸಂಪರ್ಕ ಸಹ ಕಡಿತವಾಗಿದೆ.
ಸಧ್ಯ ಕರಾವಳಿ ಕಾವಲು ಪಡೆ ಮೀನುಗಾರರ ಪತ್ತೆಗೆ ಪ್ರಯತ್ನ ನಡೆಸಿದೆ. ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳು ಆತಂಕ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ