ಉಡುಪಿ: ಮಧ್ಯಾಹ್ನದ ಬಿಸಿಯೂಟ ಸೇವಿಸದ್ದಕ್ಕೆ ವಿದ್ಯಾರ್ಥಿಗೆ ಥಳಿತ

ಸರ್ಕಾರ ನೀಡುವ ಮಧ್ಯಾಹ್ನದ ಬಿಸಿಯೂಟ ತಿನ್ನದಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಆರು ವರ್ಷದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ಉಡುಪಿಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಉಡುಪಿ: ಸರ್ಕಾರ ನೀಡುವ ಮಧ್ಯಾಹ್ನದ ಬಿಸಿಯೂಟ ತಿನ್ನದಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಆರು ವರ್ಷದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ಉಡುಪಿಯ ಕಾರ್ಕಳ ತಾಲೂಕಿನ ಶಾಲೆಯಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ನಿವಾಸಿಗಳಾದ ಕೃಷ್ಣ ಕೋಟಿಯಾನ್ ಮತ್ತು ರೇಣುಕಾ ದಂಪತಿ ಪುತ್ರ ಅನೀಶ್ ಬೆನ್ನ ಮೇಲೆ ಗಾಯಗಳಾಗಿದೆ. 1ನೇ ತರಗತಿ ವಿದ್ಯಾರ್ಥಿಯಾದ ಅನೀಶ್  ಸರ್ಕಾರಿ ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಶನಿವಾರ ಅನೀಶ್ ಗೆ ಜಂತುಹುಳುವಿನ ಔಷಧಿ ನೀಡಲಾಗಿತ್ತು, 
ಹೀಗಾಗಿ ಅವರ ಪೋಷಕರು ಮನೆಯಿಂದಲೇ ಮಧ್ಯಾಹ್ನದ ಊಟ ಕಳುಹಿಸಿದ್ದರು. ಮತ್ತು ಹೆಡ್ ಮಾಸ್ಟರ್ ಸುರೇಶ್ ರಾವ್ ಅವರಲ್ಲಿ ಮನೆಯ ಊಟವನ್ನೇ ತಿನ್ನಲು ಅನುವು ಮಾಡಬೇಕು ಮನವಿ ಮಾಡಿದ್ದರು.
ಆದರೆ ಶಾಲೆಯಲ್ಲಿ ತಯಾರಿಸಿದ ಊಟವನ್ನೇ ಮಾಡಬೇಕು ಎಂದು ಸುರೇಶ್ ರಾವ್ ಅನೀಶ್ ಗೆ ಒತ್ತಾಯ ಮಾಡಿದ್ದಾರೆ. ಮಧ್ಯಾಹ್ನ 12.30ರ ವೇಳೆಗೆ ತಮ್ಮ ಕಚೇರಿಗೆ ಅನೀಶ್ ನನ್ನು ಕರೆಸಿಕೊಂಡ ಮುಖ್ಯೋಪಾಧ್ಯಾಯರು ಶಾಲೆಯ ಊಟ ತಿನ್ನುವಂತೆ ಒತ್ತಾಯಿಸಿದ್ದಾರೆ.  ಆದರೆ ಅದಕ್ಕೆ ಅನೀಶ್ ಒಪ್ಪದ ಕಾರಣ ಸುರೇಶ್ ರಾವ್ ಆತನಿಗೆ ಕೋಲಿನಿಂದ ಥಳಿಸಿದ್ದಾರೆ. 
ಈ ಸಂಬಂಧ ಅನೀಶ್ ತಾಯಿ ರೇಣುಕಾ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com