ಹಾಲ್ ಟಿಕೆಟ್ ಮುದ್ರಣಕ್ಕೂ ಮುನ್ನ ಲೋಪದೋಷ ಸರಿಪಡಿಸಲು ಎಸ್ಎಸ್ಎಲ್‏ಸಿ ಮಂಡಳಿ ಅವಕಾಶ!

ಇದೇ ಮೊದಲ ಬಾರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಹೊಸದೊಂದು ಅವಕಾಶ ಒದಗಿಸಿಕೊಟ್ಟಿದೆ. .
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಹೊಸದೊಂದು ಅವಕಾಶ ಒದಗಿಸಿಕೊಟ್ಟಿದೆ. 
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿದ ನಂತರ ಮುದ್ರಣ ಮಾಡಲು ಅವಕಾಶ ನೀಡಿದೆ,
ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಡಿಸೆಂಬರ್ 31ರೊಳಗೆ ಲೋಪದೋಷಗಳನ್ನು ಗುರುತಿಸಿ ಸರಿ ಪಡಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಎಸ್ ಎಸ್ ಎಲ್ ಸಿ ಬೋರ್ಡ್ ಸೂಚಿಸಿದೆ.
ಶಾಲಾ ಆಡಳಿತ ಮಂಡಳಿಗೆ ಬೋರ್ಡ್  ವೆಬ್ ಸೈಟ್ ನ ಪಾಸ್ ವರ್ಡ್ ನೀಡಲಾಗಿದ್ದು, ಅದರಲ್ಲಿ ಲಾಗಿನ್ ಆಗಿ ತಪ್ಪುಗಳಿದ್ದರೇ ಸರಿ ಪಡಿಸುವ ಅವಕಾಶ ಕಲ್ಪಿಸಲಾಗಿದೆ, ವೆಬ್ ಸೈಟ್ ನಲ್ಲಿ 9 ವರ್ಗಗಳಿದ್ದು, ಅಭ್ಯರ್ಥಿಯ ಹೆಸರು, ಪೋಷಕರು ಹೆಸರು, ಹುಟ್ಟಿದ ದಿನಾಂಕ, ಲಿಂಗ, ಧರ್ಮ, ವಿದ್ಯಾರ್ಥಿಯ ಭಾವಚಿತ್ರ, ಅಭ್ಯರ್ಥಿಯ ದೈಹಿಕ ಸ್ಥಿತಿ ಗಳ ಬಗ್ಗೆ ಏನಾದರೂ ಲೋಪದೋಷಗಳಿದ್ದರೇ ಸರಿ ಪಡಿಸಿಕೊಳ್ಳಬಹುದಾಗಿದೆ.
ಹಾಲ್ ಟಿಕೆಟ್ ನಲ್ಲಿನ ಲೋಪದೋಷಗಳಿಂದಾಗಿ ಪ್ರತಿ ವರ್ಷ ಶೇ. 5 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ, ಪ್ರತಿ ವರ್ಷವೂ ಅಭ್ಯರ್ಥಿಗಳ ಸಹಿಯಲ್ಲಿ ಪ್ರಮುಖ ತಪ್ಪುಗಳು ಕಂಡು ಬರುತ್ತಿವೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊನಯ ಕ್ಷಣದಲ್ಲಿ ಬದಲಾವಣೆ ಮಾಡಲು ಸಾಧ್ಯವಾಗದ ಕಾರಣ ಮುಂಚೆಯೇ ಲೋಪದೋಷಗಳನ್ನು ಸರಿ ಪಡಿಸಿಕೊಳ್ಳಲು ಮಂಡಳಿ ಅವಕಾಶ ಕಲ್ಪಿಸಿಕೊಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com