ತುಮಕೂರು: ಪದ್ರಶ್ರೀ ಪರಶಸ್ತಿ ಪುರಸ್ಕೃತೆ, ಸಹಜ ಹೆರಿಗೆ ಮೂಲಕ ಸಾವಿರಾರು ಮಕ್ಕಳಿಗೆ ತಾಯಿಯಾದ ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ತುಮಕೂರಿನ ಗಂಗಸಂದ್ರದಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಡನೆ ನರಸಮ್ಮನವರ ಅಂತ್ಯ ಸಂಸ್ಕಾರ ನೆರವೇರಿದೆ.
ವಯೋಸಹಜ ಅನಾರೋಗ್ಯದ ಕಾರಣ ನರಸಮ್ಮ (98) ಮಂಗಳವಾರ ವಿಧಿವಶರಾಗಿದ್ದರು.
ವೈದ್ಯಕೀಯ ನೆರವಿನ ಅಗತ್ಯವಿಲ್ಲದೆ ಸಾವಿರಾರು ಜನರಿಗೆ ಸಹಜ ಹೆರಿಗೆಯನ್ನು ಮಾಡಿಸುವ ಮೂಲಕ ಹಲವು ಮಹಿಳೆಯರ, ಮಕ್ಕಳ ಪಾಲಿಗೆ ತಾಯಿಯಂತಿದ್ದ ನರಸಮ್ಮನವರಿಗೆ 2018ನೇ ಸಾಲಿನಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.