ಇದಾಗಿ ಡಿಸೆಂಬರ್26ರಂದು ಪ್ರೇಮಿಗಳಿಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದು ಮತ್ತೆ ಹಿಂತಿರುಗಿರಲಿಲ್ಲ. ಗುರುವಾರ ರಾತ್ರಿ ಕೀರ್ತಿ ಹಾಗೂ ಯುವತಿ ಹೊಂಡಾ ಬೈಕ್ ನಲ್ಲಿ ಮೂಡಿಗೆರೆಯತತ್ಯೋಳ ರಸ್ತೆಯ ಹೆಸಗಲ್ ಚಂದ್ರೇಗೌಡ ಎಂಬುವವರ ತೋಟಕ್ಕೆ ತೆರಳಿದ್ದು ಅಲ್ಲಿ ವಿಷ ಸೇವಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ತೋಟದ ಕೆಲಸಕ್ಕೆ ಆಗಮಿಸಿದ್ದ ಸ್ಥಳೀಯರು ಆಗಮಿಸಿದ ಬಳಿಕ ಘಟನೆ ಬೆಳಕು ಕಂಡಿದೆ. ಅಷ್ಟರಲ್ಲಿ ಯುವಕ ಸಾವನ್ನಪ್ಪಿದ್ದು ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು.