ನಕಲಿ ಅಂಕಪಟ್ಟಿ ಸಲ್ಲಿಸಿ 6 ವರ್ಷ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಮಹಿಳೆ!

ನಕಲಿ ಮತ್ತು ತಿದ್ದುಪಡಿ ಮಾಡಿದ ಅಂಕಪಟ್ಟಿಯೊಂದಿಗೆ ಸರ್ಕಾರಿ ಪ್ರಥಮ ....
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಶಿವಮೊಗ್ಗ: ನಕಲಿ ಮತ್ತು ತಿದ್ದುಪಡಿ ಮಾಡಿದ ಅಂಕಪಟ್ಟಿಯೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 6 ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಮಹಿಳೆ ಕಾರ್ಯನಿರ್ವಹಿಸುತ್ತಿದ್ದ ಘಟನೆ ನಡೆದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕಾರ್ಯಕರ್ತರೊಬ್ಬರು ಆಕೆಯ ಸರ್ಟಿಫಿಕೇಟ್ ನಕಲಿ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸೇವೆಯಿಂದ ರದ್ದುಮಾಡಲಾಗಿದೆ.
ಕಾಲೇಜಿನ ಪ್ರಾಂಶುಪಾಲರು ಪ್ರಮಾಣಪತ್ರವನ್ನು ವಿಶ್ವವಿದ್ಯಾಲಯದಲ್ಲಿ ಪರೀಕ್ಷಿಸಿ ನೋಡಿದಾಗ ಆಕೆ ಈ ಕಾಲೇಜಿಗೂ ಮುನ್ನ ಎರಡು ಕಾಲೇಜುಗಳಲ್ಲಿ 5 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿ 4.5 ಲಕ್ಷಕ್ಕೂ ಅಧಿಕ ಗೌರವ ಸಂಭಾವನೆ ಪಡೆದುಕೊಂಡಿರುವುದು ಗೊತ್ತಾಯಿತು.
ವ್ಯಾಲೆಂಟೀನ್ ಎವಲಿನ್ ಡಿಸೋಜ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ 2008-09ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು.ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಅತಿಥಿ ಉಪನ್ಯಾಸಕಿ ಹುದ್ದೆಗೆ 2010-11ರಲ್ಲಿ ಚನ್ನಗಿರಿಯ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ 2013-14ರವರೆಗೆ ಕೆಲಸ ಮಾಡಿದರು.
ನಂತರ ಭದ್ರಾವತಿಯ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014-15ರಲ್ಲಿ ಕೆಲಸಕ್ಕೆ ಸೇರಿಕೊಂಡು ಕಳೆದ ತಿಂಗಳವರೆಗೆ ಕೆಲಸ ಮಾಡಿದ್ದಾರೆ.
ಇಲ್ಲಿ ಮುಖ್ಯವಾದ ವಿಷಯವೆಂದರೆ ಎರಡೂ ಕಾಲೇಜುಗಳ ಪ್ರಾಂಶುಪಾಲರಾಗಲಿ, ಕಾಲೇಜು ಶಿಕ್ಷಣ ಇಲಾಖೆಯಾಗಲಿ ಈಕೆಯ ದಾಖಲೆಗಳ ನಿಖರತೆಯನ್ನು ಪರೀಕ್ಷಿಸಿರಲಿಲ್ಲ.
ಮೂಲ ಅಂಕಪಟ್ಟಿಯಲ್ಲಿ ಮುದ್ರಣಗೊಂಡ ಸಂಖ್ಯೆಗಳು ಮತ್ತು ಅಕ್ಷರಗಳು ಮತ್ತು ತಿದ್ದುಪಡಿ ಮಾಡಿದ ಅಂಕಪಟ್ಟಿಯಲ್ಲಿದ್ದ ಅಕ್ಷರಗಳು ಮತ್ತು ಸಂಖ್ಯೆಗಳು ಹೊಂದಿಕೆಯಾಗುತ್ತಿರಲಿಲ್ಲ. ಟೈಪ್ ರೈಟಿಂಗ್ ಮೆಶಿನ್ ಮೂಲಕ ಅಂಕಗಳನ್ನು ತಿದ್ದಿಕೊಂಡಿದ್ದರು.
ಇತ್ತೀಚೆಗೆ ಟೈಪ್ ರೈಟಿಂಗ್ ಮೆಶಿನ್ ಬದಲಿಗೆ ಕಂಪ್ಯೂಟರೀಕೃತ ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯಗಳು ನೀಡುತ್ತವೆ. ಕಾಲೇಜುಗಳಿಗೆ ಸೇರುವಾಗ ಈಕೆ ನಕಲಿ ಅಂಕಪಟ್ಟಿಗಳನ್ನು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com