ನ್ಯಾಯಾಧೀಶರ ನೇಮಕಾತಿ ವಿಳಂಬ, ವಕೀಲರಿಂದ ಉಪವಾಸ ಸತ್ಯಾಗ್ರಹ, ಪ್ರತಿಭಟನೆ

ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ......
ನ್ಯಾಯಾಧೀಶರ ನೇಮಕಾತಿ ವಿಳಂಬ, ವಕೀಲರಿಂದ ಉಪವಾಸ ಸತ್ಯಾಗ್ರಹ, ಪ್ರತಿಭಟನೆ
ನ್ಯಾಯಾಧೀಶರ ನೇಮಕಾತಿ ವಿಳಂಬ, ವಕೀಲರಿಂದ ಉಪವಾಸ ಸತ್ಯಾಗ್ರಹ, ಪ್ರತಿಭಟನೆ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಿರಿಯ ವಕೀಲರು ಸೇರಿ ಕಾನೂನು ಸಲಹೆಗಾರರ ಸಂಘಟನೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಬಿ.ವಿ ಆಚಾರ್ಯ, ಪ್ರೊ. ರವಿವರ್ಮ ಕುಮಾರ್, ಅಶೋಕ್ ಹಾರನಹಳ್ಳಿ, ಸದಾಶಿವ ರೆಡ್ಡಿ ಮತ್ತು ಎ.ಪಿ.ರಂಗನಾಥ್, ಬೆಂಗಳೂರುನ ಅಡ್ವೊಕೇಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಇತರರು. ಹೈಕೋರ್ಟ್‌ನ ಗೋಲ್ಡೆನ್ ಜ್ಯೂಬಿಲಿ ಗೇಟ್ ಎದುರು ಸತ್ಯಾಗ್ರಹ ನಡೆಸಿದ್ದರು. ಖಾಲಿ ಹುದ್ದೆಗಳು ಭರ್ತಿಯಾಗದ ಪಕ್ಷದಲ್ಲಿ ಒಂದು ವಾರದ ಕಾಲ ಮುಷ್ಕರ ಮುಂದುವರಿಯಲಿದೆ ಎಂದು ಅವರು ಹೇಳಿದರು. ಒಂದು ವಾರದ ಬಳಿಕ ಸಮಸ್ಯೆ ಇತ್ಯರ್ಥವಾಗದೇ ಹೋದಲ್ಲಿ ಒಂದು ದಿನದ ಮಟ್ಟಿಗೆ ರಾಜ್ಯಾದ್ಯಂತ ನ್ಯಾಯಾಲಯ ಕಲಾಪಗಳಿಂದ ದೂರವಿರಲು ವಕೀಲರು ತೀರ್ಮಾನಿಸಿದ್ದಾರೆ. ಇಷ್ಟಕ್ಕೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳ್ದಿದ್ದಲ್ಲಿ ಸಂಸತ್ತಿನ ಎದುರು ಧರಣಿ ಆಯೋಜಿಸಲಾಗುವುದ ಅವರು ಮಾಹಿತಿ ನೀಡಿದ್ದಾರೆ.
ನಿನ್ನೆ ನಡೆದ ಉಪವಾಸ ಸತ್ಯಾಗ್ರಹದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿಬಿ ಜಯಚಂದ್ರ, ಎಂಎಲ್ ಸಿ ಗಳಾದ ವಿಎಸ್ ಉಗ್ರಪ್ಪ ಹಾಗೂ ಕೆ.ಗೋವಿಂದರಾಜು ಪ್ರತಿಭಟನಾ ನಿರತರನ್ನು ಭೇಟಿಯಾಗಿದ್ದಾರೆ. "ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಮಲತಾಯಿ ಧೋರಣೆ ನಉಸರಿಸುತ್ತಿದೆ. ನಾವು ಈ ಸ?ಂಬಂಧ ದೆಹಲಿಗೆ ತರಳಿದಾಗ ಪ್ರಧಾನಿ ಹಾಗೂ ಕೇಂದ್ರ ಕಾನೂಣು ಸಚಿವರನ್ನು ಬೇಟಿಯಾಗಿ ಮಾತುಕತೆ ನಡೆಸುತ್ತೇವೆ. ನೇಮಕಾತಿ ವಿಉಚಾರವಾಗಿ ಸದನದಲ್ಲಿ ಗೊತ್ತುವಳಿ ಅಂಗೀಕರಿಸಲಾಗುವುದು" ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೂಡಾ ಪ್ರತಿಭಟನಾ ಸ್ಥಳಕ್ಕೆ ತೆರಳಿ ವಕೀಲರೊಡನೆ ಮಾತುಕತೆ ನಡೆಸಿದ್ದಾರೆ. ನ್ಯಾಯಮೂರ್ತಿಗಳ ನೇಮಕದ ಬಗೆಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವಂತೆ ನಾವು ಕೇಂದ್ರ ಸರ್ಕಾರಕ್ಕೆ ಹೇಳುತ್ತೇವ್. ಈ ವಿಚಾರವನ್ನು ಸೂಕ್ತ ವ್ಯಕ್ತಿಗಳ ಗಮನಕ್ಕೆ ತರಲಾಗುತ್ತದೆ, ವಕೀಲರು ತಾವು ನಡೆಸುತ್ತಿರುವ ಪ್ರತಿಭಟನೆಯನ್ನು ಕೈಬಿಡಬೇಕೆಂದು  ಡಿ.ವಿ.ಸದಾನಂದಗೌಡ ಮನವಿ ಮಾಡಿದ್ದಾರೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರ ಹುದ್ದೆಗಾಗಿ ಉನ್ನತ ದರ್ಜೆಯ ಐದು ವಕೀಲರ ಹೆಸರುಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಇದಾಗಲೇ ಶಿಫಾರಸ್ಸು ಮಾಡಿತ್ತಾದರೂ ಇನ್ನೂ ನೇಮಕ ಪ್ರಕ್ರಿಯೆ ನಡೆದಿಲ್ಲ.
ಕರ್ನಾಟಕ ಹೈಕೋರ್ಟ್ ನಲ್ಲಿನ ಒಟ್ಟು ನ್ಯಾಯಾಧೀಶ ಹುದ್ದೆಗಳ ಸಂಖ್ಯೆ - 62 
ಹಾಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರ ಸಂಖ್ಯೆ - 24 
ಖಾಲಿ ಉಳಿದಿರುವ ಹುದ್ದೆಗಳು - 38 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com