ಬೆಂಗಳೂರಿಗೆ 161 ಕಿ.ಮೀ ಉದ್ದದ ಸಬ್ ಅರ್ಬನ್ ರೈಲ್ವೆ ಯೋಜನೆ ಅನುಮೋದನೆ

ನಗರಕ್ಕೆ ಸಬ್ ಅರ್ಬನ್ ರೈಲು ಸಂಪರ್ಕ ಬೇಕೆಂಬ ಎರಡು ದಶಕಗಳ ಬೇಡಿಕೆ ಕೊನೆಗೂ ಈಡೇರುವ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರಕ್ಕೆ ಸಬ್ ಅರ್ಬನ್ ರೈಲು ಸಂಪರ್ಕ ಬೇಕೆಂಬ ಎರಡು ದಶಕಗಳ ಬೇಡಿಕೆ ಕೊನೆಗೂ ಈಡೇರುವ ಲಕ್ಷಣ ಕಾಣುತ್ತಿದೆ. ಮೊನ್ನೆ ಮಂಡಿಸಲಾಗಿರುವ ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಅನುಮೋದನೆ ನೀಡಲಾಗಿದೆ.
142 ಕಿಲೋ ಮೀಟರ್ ಕಾರಿಡಾರ್ ನ 12,061 ಕೋಟಿ ರೂಪಾಯಿ ವೆಚ್ಚದಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ. ದ್ವಿಗುಣ ಯೋಜನೆಯಲ್ಲಿ ಹೆಚ್ಚುವರಿ 19 ಕಿಲೋ ಮೀಟರ್ ಸಬ್ ಅರ್ಬನ್ ರೈಲು ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು ಈ ಮೂಲಕ ಒಟ್ಟಾರೆ ಸಬ್ ಅರ್ಬನ್ ಸಂಪರ್ಕ 161 ಕಿಲೋ ಮೀಟರ್ ಗಳ ದೂರ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯ, ಬಾಣಸವಾಡಿ ಮತ್ತು ಹೆಬ್ಬಾಳ ಮಧ್ಯೆ 19 ಕಿಲೋ ಮೀಟರ್ ದೂರದ ಸಬ್ ಅರ್ಬನ್ ರೈಲ್ವೆ ಸಂಪರ್ಕ ಮತ್ತು ಚನ್ನ ಪಟ್ಟಣ ಹಾಗೂ ಬೈಯಪ್ಪನಹಳ್ಳಿ ಮಾರ್ಗವಾಗಿ ಕರ್ಮೆಲರಾಮ್ ಗೆ ಸಬ್ ಅರ್ಬನ್ ರೈಲ್ವೆ ಸಂಪರ್ಕವನ್ನು ದ್ವಿಗುಣ ಯೋಜನೆ ವಿಭಾಗದಲ್ಲಿ ಕೈಗೊಳ್ಳಲಾಗುತ್ತದೆ. ಯೋಜನೆಗೆ ಸಂಬಂಧಪಟ್ಟಂತೆ 1 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ಮುಂಗಡ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ದ್ವಿಗುಣ ಯೋಜನೆ: ಬಜೆಟ್ ನಲ್ಲಿ ಅನುಮೋದನೆಗೊಂಡ ಇತರ ಯೋಜನೆಗಳೆಂದರೆ 212.54 ಕಿಲೋ ಮೀಟರ್ ದ್ವಿಗುಣ ಯೋಜನೆ 840 ಕೋಟಿ ರೂಪಾಯಿಗಳಲ್ಲಿ. ಬೈಯಪ್ಪನಹಳ್ಳಿ ಮತ್ತು ಹೊಸೂರು ನಡುವೆ 375.67 ಕೋಟಿ ರೂಪಾಯಿಗಳಲ್ಲಿ 49 ಕಿಲೋ ಮೀಟರ್ ಉದ್ದದ ದ್ವಿಗುಣ ಯೋಜನೆ, 21.7 ಕಿಲೋ ಮೀಟರ್ ಉದ್ದದ ರೈಲು ಮಾರ್ಗ 169.95 ಕೋಟಿ ರೂಪಾಯಿ ವೆಚ್ಚಗಳಲ್ಲಿ ಯಶವಂತಪುರ ಮತ್ತು ಚನ್ನಸಂದ್ರ ನಡುವೆ ಹಾಗೂ 41.5 ಕಿಲೋ ಮೀಟರ್ ಉದ್ದದ ದ್ವಿಗುಣ ರೈಲು ಮಾರ್ಗ ಸಂಚಾರ ಪೆನ್ನುಕೊಂಡ ಮತ್ತು ಧರ್ಮಾವರಂ ಮಧ್ಯೆ 294.67 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com