ಬೇಸಿಗೆಗೆ ವಿದ್ಯುತ್ ಸಮಸ್ಯೆ ಇಲ್ಲ: ಇಂಧನ ಸಚಿವ ಡಿಕೆ ಶಿವಕುಮಾರ್

ಈ ವರ್ಷ ಬೇಸಿಗೆ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂಧನ ಸಚಿವ ಡಿ ಕೆ ಶಿವಕುಮಾರ್,
ಇಂಧನ ಸಚಿವ ಡಿ ಕೆ ಶಿವಕುಮಾರ್,
Updated on
ಬೆಂಗಳೂರು: ಈ ವರ್ಷ ಬೇಸಿಗೆ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಸಚಿವರು ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸಲು ನಾವು ಶಕ್ತರಾಗಿದ್ದೇವೆ, ಬೇಸಿಗೆಯಲ್ಲಿ ಯಾವುದೇ ವಿದ್ಯುತ್ ಕೊರತೆ ಉಂಟಾಗುವುದಿಲ್ಲ ಎಂಡರು.
"ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರೂ ಮಳೆನೀರು ಸಂಗ್ರಹಾಗಾರಗಳು ಮತ್ತು ಅಣೆಕಟ್ಟುಗಳು ಈ ವರ್ಷ ಶೇ . 60ರಷ್ಟು ಮಾತ್ರ ತುಂಬಿವೆ. 
"ಇನ್ನು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಕಲ್ಲಿದ್ದಲು ಪೂರೈಕೆ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಲ್ಲಿ ಬಹುತೇಕ ಘಟಕಗಳಿಗೆ ಶೇ.25ರಷ್ಟು ಮಾತ್ರವೇ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಹಿಂದೆ, ಕಲ್ಲಿದ್ದಲು ಬ್ಲಾಕ್ ಗಳನ್ನು ಕರ್ನಾಟಕಕ್ಕೆ ಹಂಚಲಾಗಿತ್ತು, ಆದರೆ ಈ ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ.
ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡುವ ನಮ್ಮ ಪ್ರಯತ್ನಗಳು ವ್ಯರ್ಥವಾದವು. ಕಲ್ಲಿದ್ದಲು ಸರಬರಾಜು ಇಲ್ಲದೆ ಹೋದಲ್ಲಿ ನಮ್ಮ ಉಷ್ಣ ವಿದ್ಯುತ್ ಸ್ಥಾವರಗಳನ್ನು ದೀರ್ಘಕಾಲದವರೆಗೆ ನಡೆಸಲು ಸಾಧ್ಯವಿಲ್ಲ. ಬೇಸಿಗೆ ಸಮೀಪಿಸಿದ್ದು  ನಮಗೆ ಬಳಕೆಗಾಗಿ ಮತ್ತು ಕೃಷಿ ಉದ್ದೇಶಗಳಿಗಾಗಿ ನೀರಿನ ಅಗತ್ಯವಿರುತ್ತದೆ. ಹಾಗಿದ್ದೂ ಈ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯನ್ನು ನಾವು ನೀಭಾಯಿಸುತ್ತೇವೆ." ಸಚಿವ ಡಿಕೆಶಿ ಹೇಳಿದ್ದಾರೆ.
ರಾಜ್ಯಕ್ಕೆ ಇಂಡೋನೇಷಿಯಾ ಕಲ್ಲಿದ್ದಲು?
ರಾಜ್ಯ ಸ್ವಾಮ್ಯದ ಉಷ್ಣ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರವು ವಿದೇಶದಿಂಡ ಕಲ್ಲಿದ್ದಲು ಖರೀದಿಸಲು ಯೋಜಿಸುತ್ತಿದೆ. "ನಾವು ಕಲ್ಲಿದ್ದಲು ಆಮದಿಗಾಗಿ ಹೊರದೇಶಗಳಿಂದ ಟೆಂಡರ್ ಆಹ್ವಾನಿಸಿದ್ದೇವೆ. ಕಲ್ಲಿದ್ದಲು ಖರೀದಿ ಸಂಬಂಧ ಮುಂದಿನ ಹತ್ತು ದಿನದಲ್ಲಿ ಆದೇಶ ನೀಡಲಾಗುತ್ತದೆ.ಸಚಿವರು ಹೇಳಿದ್ದಾರೆ. 
ಕರ್ನಾಟಕಕ್ಕೆ ಇಂಡೋನೇಷಿಯಾದಿಂದ ಕಲ್ಲಿದ್ದಲು ಆಮದಾಗಲಿದೆ ಎಂದು ಅಧಿಕಾರಿ ವರ್ಗದ ಮೂಲಗಳು ಖಚಿತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com