ಬೆಂಗಳೂರಿನ ಕಲೆ, ಸಂಸ್ಕೃತಿ ಬಗ್ಗೆ ಪ್ರವಾಸಿಗರಿಗೆ ಪರಿಚಯಿಸುವ ಬಸ್ ಚಾಲಕ!

ಇವರೊಬ್ಬ ವಿಶಿಷ್ಟ ಬಸ್ ಚಾಲಕ ಎನ್ನಬಹುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ....
ಪ್ರವಾಸಿಗರಿಗೆ ಮಾಹಿತಿ ನೀಡುತ್ತಿರುವ ಬೆಂಗಳೂರು ರೌಂಡ್ಸ್ ಬಸ್ ನ ಚಾಲಕ ಧನ್ ಪಾಲ್
ಪ್ರವಾಸಿಗರಿಗೆ ಮಾಹಿತಿ ನೀಡುತ್ತಿರುವ ಬೆಂಗಳೂರು ರೌಂಡ್ಸ್ ಬಸ್ ನ ಚಾಲಕ ಧನ್ ಪಾಲ್
ಬೆಂಗಳೂರು: ಇವರೊಬ್ಬ  ವಿಶಿಷ್ಟ  ಬಸ್ ಚಾಲಕ ಎನ್ನಬಹುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಜೀವನ ನಿರ್ವಹಣೆಗೆ ಕೆಲಸ ಮಾಡುತ್ತಿರುವ ಇವರಿಗೆ ಬೆಂಗಳೂರು ನಗರದ ವಿಶಿಷ್ಟ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ.ನಗರದ ಪ್ರಾಚೀನ ಕಲೆ, ಸ್ಮಾರಕಗಳು, ಕೆತ್ತನೆ, ಬರಹಗಳು ಮತ್ತು ಇತಿಹಾಸಗಳ ಬಗ್ಗೆ ಇವರಿಗೆ ಮಾಹಿತಿಯಿದೆ. 
ತಮಿಳುನಾಡು ಮತ್ತು ಕೇರಳ ದಂಪತಿಗೆ ಹುಟ್ಟಿದ ಕೆ. ದನಪಾಲ್(53ವ) ಗೌರಿಬಿದನೂರಿನ ಮಂಚೇನಹಳ್ಳಿಯವರು. ಇವರು 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು. ಇವರಿಗೆ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ. ಅದರ ಜೊತೆಗೆ ತೆಲುಗು, ತಮಿಳು, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯನ್ನು ಕೂಡ ಬಲ್ಲರು. ಹಲವು ಭಾಷೆಗಳು ಗೊತ್ತಿರುವುದರಿಂದ ಅವರ ಪ್ರಾಚೀನ ಕಲೆ, ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಹಂಬಲಕ್ಕೆ ಪೂರಕವಾಯಿತು.
1981ರಲ್ಲಿ ಬೆಂಗಳೂರಿಗೆ ಬಂದ ಧನಪಾಲ್ 1987ರಲ್ಲಿ ಬಿಎಂಟಿಸಿಗೆ ಕೆಲಸಕ್ಕೆ ಸೇರಿದರು. ಬೆಂಗಳೂರು ರೌಂಡ್ಸ್ ಎಂದು ಪ್ರವಾಸಿಗರನ್ನು ಬೆಂಗಳೂರು ಸುತ್ತ ಪರಿಚಯಿಸುವ ಸರ್ಕಾರದ ಕಾರ್ಯದಲ್ಲಿ ನಿಯೋಜಿತನಾಗಿದ್ದೆ. ಅದು 2006ರ ಸಮಯ. ಆ ಅವಕಾಶ ನನ್ನ ಜೀವನವನ್ನು ಬದಲಾಯಿಸಿತು. ಕೆಲವು ಪ್ರವಾಸಿಗರು ಬಸ್ಸಿನಲ್ಲಿರುತ್ತಿದ್ದರಿಂದ ಅವರನ್ನು ಬೆಂಗಳೂರು ಸುತ್ತಮುತ್ತ ಕರೆದುಕೊಂಡು ಹೋಗಿ ಅವರಿಗೆ ಸ್ಥಳಗಳನ್ನು ಪರಿಚಯಿಸುವ ಕೆಲಸವನ್ನು ಕೂಡ ಮಾಡುತ್ತಿದೆ ಎನ್ನುತ್ತಾರೆ.
ಒಂದು ದಿನ ಓರ್ವ ಪ್ರವಾಸಿಗರು ನನ್ನಲ್ಲಿ ಸ್ಯಾಂಕಿ ಕೆರೆಗೆ ಆ ಹೆಸರು ಹೇಗೆ ಬಂತು ಎಂದು ಕೇಳಿದರು. ಮತ್ತೊಂದು ದಿನ ಸ್ಯಾಂಕಿ ಕೆರೆ ಇರುವ ಪ್ರದೇಶವನ್ನು ಸದಾಶಿವನಗರ ಎಂದು ಏಕೆ ಕರೆಯುತ್ತಾರೆ ಎಂದು ಕೇಳಿದ್ದರು. ಇಂತಹ ಪ್ರಶ್ನೆಗಳನ್ನು ಎದುರಿಸಲು ನಾನು ಹೆಚ್ಚೆಚ್ಚು ತಿಳಿದುಕೊಳ್ಳಬೇಕಾಗುತ್ತಿತ್ತು ಎನ್ನುತ್ತಾರೆ ಧನಪಾಲ್ 
ಬೆಂಗಳೂರು ನಗರದಲ್ಲಿರುವ ಖ್ಯಾತ ವ್ಯಕ್ತಿಗಳ ಗೋರಿಗಳಿರುವ ಸ್ಥಳಕ್ಕೆ ತೆರಳಿ ಅಲ್ಲಿನ ಬಗ್ಗೆ ಕೂಡ ಇವರು ಅಧ್ಯಯನ ನಡೆಸುತ್ತಾರಂತೆ.
1988ರಲ್ಲಿ ಬೆಂಗಳೂರಿನ ದೂರದರ್ಶನ ಕಚೇರಿ ಎದುರು ಪ್ರತ್ಯೇಕ ಕನ್ನಡ ಚಾನೆಲ್ ಬೇಕು ಎಂದು ಪ್ರತಿಭಟನೆ ನಡೆಸಿದ್ದನ್ನು ನೆನಪಿಸಿಕೊಳ್ಳುತ್ತಾರೆ.ಇವರೀಗ ಬಿಎಂಟಿಸಿಯ ಕನ್ನಡ ಕ್ರಿಯಾ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಕನ್ನಡ ಗೆಳೆಯರ ಬಳಗ, ಬೆಂಗಳೂರು ತಮಿಳು ಸಂಘ ಇವರನ್ನು ಸನ್ಮಾನಿಸಿವೆ.
ಯಲಹಂಕದಲ್ಲಿ ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ವಾಸಿಸುತ್ತಿರುವ ಧನ್ ಪಾಲ್ ಅವರಿಗೆ ಯಲಹಂಕ ಸುತ್ತಮುತ್ತ ಪರಿಸರದ ಬಗ್ಗೆ ವಿಶೇಷ ಒಲವು. ಈ ಪ್ರದೇಶದ ಕುರಿತು ಸದ್ಯವೇ ಪುಸ್ತಕ ಬರೆದು ಹೊರತರುವ ಯೋಜನೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com