ಪಾಲಿಕೆ ಸದಸ್ಯೆ ರೇಖಾ ಪತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು

ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಪಾಲಿಕೆ ಸದಸ್ಯೆ ರೇಖಾ ಅವರ ಪತಿ ಎಸ್‌. ಕದಿರೇಶ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನವೀನ್‌ ಹಾಗೂ ಆತನ ...
ಬಿಜೆಪಿ ಕಾರ್ಪೊರೇಟರ್ ರೇಖಾ ಮತ್ತು ಅವರ ಪತಿ ಕದಿರೇಶ್ (ಸಂಗ್ರಹ ಚಿತ್ರ)
ಬಿಜೆಪಿ ಕಾರ್ಪೊರೇಟರ್ ರೇಖಾ ಮತ್ತು ಅವರ ಪತಿ ಕದಿರೇಶ್ (ಸಂಗ್ರಹ ಚಿತ್ರ)
ಬೆಂಗಳೂರು:  ಛಲವಾದಿಪಾಳ್ಯ ವಾರ್ಡ್‌ನ ಬಿಜೆಪಿ ಪಾಲಿಕೆ ಸದಸ್ಯೆ ರೇಖಾ ಅವರ ಪತಿ ಎಸ್‌. ಕದಿರೇಶ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನವೀನ್‌ ಹಾಗೂ ಆತನ ತಮ್ಮ ವಿನಯ್‌ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಆಂಜನಪ್ಪ ಗಾರ್ಡನ್‌ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ಫೆ. 7ರಂದು ಕದಿರೇಶ್‌ ಕೊಲೆ ನಡೆದಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರು, ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡಿದ್ದರು. ಅಲ್ಲಿಂದಲೇ ನಗರಕ್ಕೆ ಬಂದಿದ್ದ ಅವರು ವಕೀಲರ ಜತೆಗೆ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರಾದರು.
ಪೊಲೀಸರು ಗುಂಡು ಹಾರಿಸಿ ತಮ್ಮನ್ನು ಬಂಧಿಸಬಹುದು ಭಾವಿಸಿದ್ದ ಆರೋಪಿಗಳ,  ವಕೀಲರ ರೀತಿಯಲ್ಲೇ ಸೂಟ್‌ ಧರಿಸಿ ನ್ಯಾಯಾಲಯ ಪ್ರವೇಶಿಸಿದ್ದರು. ನಂತರ ನ್ಯಾಯಾಧೀಶರ ಮುಂದೆ ಶರಣಾದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
ಅವರು ಎಂಬುದು ಆರಂಭದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅವರ ಪರ ವಕೀಲರು ನ್ಯಾಯಾಲಯದೊಳಗೆ ಹೋದ ನಂತರವೇ ಕೈ ಮುಗಿದುಕೊಂಡು ಆರೋಪಿಗಳು ಒಳಗೆ ಬಂದರು. ಪೊಲೀಸರ ಭಯವಿರುವುದರಿಂದ ಈ ವೇಷದಲ್ಲಿ ಬಂದಿರುವುದಾಗಿ ಅವರು ನ್ಯಾಯಾಲಯಕ್ಕೆ ಹೇಳಿದರು’ 
ಆರೋಪಿಗಳ ವಿರುದ್ಧ ಗಂಭೀರ ಆರೋಪ ಇದೆ. ಕೊಲೆ ನಡೆದ ದಿನದಿಂದಲೇ ಆರೋಪಿಗಳಿಗಾಗಿ ನಾಲ್ಕು ತಂಡಗಳು ನಿರಂತರವಾಗಿ ಶೋಧ ನಡೆಸುತ್ತಿತ್ತು. ವಿಚಾರಣೆಗಾಗಿ ಅವರಿಬ್ಬರನ್ನು 15 ದಿನ ಕಸ್ಟಡಿಗೆ ನೀಡಬೇಕು’ ಎಂದು ಪೊಲೀಸರು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳನ್ನು 10 ದಿನಗಳವರೆಗೆ ಪೊಲೀಸರ ಕಸ್ಟಡಿಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com