ಕಲಬುರ್ಗಿ: ರಾಜ್ಯದ ಮೊದಲ ಸಾರ್ವಜನಿಕ ಉಚಿತ ವೈ–ಫೈ ಹಾಟ್‌ಸ್ಪಾಟ್ ಸೇವೆಗೆ ಚಾಲನೆ
ರಾಜ್ಯ
ಕಲಬುರ್ಗಿ: ರಾಜ್ಯದ ಮೊದಲ ಸಾರ್ವಜನಿಕ ಉಚಿತ ವೈ–ಫೈ ಹಾಟ್‌ಸ್ಪಾಟ್ ಸೇವೆಗೆ ಚಾಲನೆ
ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಜಾರಿಗೊಳಿಸಲಾದ ರಾಜ್ಯದ ಮೊದಲ ನಗರ ಕೇಂದ್ರೀತ ........
ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಜಾರಿಗೊಳಿಸಲಾದ ರಾಜ್ಯದ ಮೊದಲ ನಗರ ಕೇಂದ್ರೀತ ಉಚಿತ ಸಾರ್ವಜನಿಕ ವೈ–ಫೈ ಸೇವೆ ಕಲಬುರ್ಗಿ ಪಾಲಿಕೆ ಆವರಣದಲ್ಲಿ ಚಾಲನೆಗೆ ಬಂದಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಈ ವೈ–ಫೈ ಸೇವೆಗೆ ಚಾಲನೆ ನೀಡಿದ್ದಾರೆ.
"ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಆವರಣದಲ್ಲಿ ಉಚಿತ ವೈ- ಫೈ ಸೇವೆ ಪ್ರಾರಂಭಿಸಲಾಗುತ್ತಿದ್ದು ಇದಕ್ಕಾಗಿ ಇಂಡಸ್ ಟವರ್ಸ್ ಸಂಸ್ಥೆಯ ಸ್ಮಾರ್ಟ್ ಪೋಲ್ ನ್ನು ಬಳಕೆ ಮಾಡಲಾಗುವುದು. ದೇಶದಲ್ಲಿ ಇದುವರೆಗೆ ಕೇವಲ 12 ಕಡೆಗಳಲ್ಲಿ ಸ್ಮಾರ್ಟ್ ಪೋಲ್ ಅಳವಡಿಸಲಾಗಿದೆ, ಅದರಲ್ಲಿ ಕಲಬುರ್ಗಿ ಸಹ ಸೇರಿದೆ." ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ಪಾಲಿಕೆ ಸುತ್ತಲಿನ 250 ಮೀಟರ್ ವ್ಯಾಪ್ತಿಯಲ್ಲಿ ಈ ಸೌಲಭ್ಯ ದೊರೆಯಲಿದ್ದು ಏಕಕಾಲಕ್ಕೆ 150 ಜನರು ಇದನ್ನು ಬಳಸಬಹುದಾಗಿದೆ. 1ಎಂಬಿಪಿಎಸ್ ವೇಗದ ವೈ–ಫೈ ಸೌಲಭ್ಯ ದೊರೆಯಲಿದೆ. ಓರ್ವ ವ್ಯಕ್ತಿ ದಿನಕ್ಕೆ 30 ನಿಮಿಷಗಳ ಕಾಲ ಉಚಿತ ವೈ–ಫೈ ಬಳಸಬಹುದು.
"ಕಲಬುರ್ಗಿ ನಗರದ 30 ಕಡೆ ಸಾರ್ವಜನಿಕ ಉಚಿತ ವೈ–ಫೈ ಸೇವೆ ಪ್ರಾರಂಭಗೊಳ್ಳುತ್ತಿದ್ದು 11 ಪಾಲಿಕೆಗಳ ವ್ಯಾಪ್ತಿಯಲ್ಲಿ 5 ಸಾವಿರ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯದ 2,500 ಗ್ರಾಮ ಪಂಚಾಯತ್ ಗಳಲ್ಲಿ ಸಹ ವೈ–ಫೈ ಸೌಲಭ್ಯ ನೀಡಲಾಗುತ್ತದೆ. ಡಿಜಿಟಲ್ ಸೇವೆ ಪಡೆಯಲಿಚ್ಚಿಸುವ ಸಾರ್ವಜನಿಕರಿಗೆ ಇದರಿಂಡ ಅನುಕೂಲವಾಗಲಿದೆ. " ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಮೇಯರ್ ಶರಣಕುಮಾರ ಮೋದಿ, ಇಂಡಸ್ ಟವರ್ಸ್ ಕಂಪನಿಯ ಕರ್ನಾಟಕ ವಲಯದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಬ್ಬು ಅಯ್ಯರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ