ಕಾಶ್ಮೀರದಲ್ಲಿನ ಭಯೋತ್ಪಾದಕರನ್ನು ಹೊಡೆದುರುಳಿಸಿ ದೇಶಕ್ಕೆ ಹೆಮ್ಮೆ ತಂದ ಕರ್ನಾಟಕದ ಯೋಧ

ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು, ನಾಲ್ಕು ದಿನಗಳಿಂಡ ಒಳ ನುಸುಳಿದ್ದ ಲಷ್ಕರ್-ಎ-ತೋಯ್ಬಾದ ಭಯೋತ್ಪಾದಕರನ್ನು ನಮ್ಮ ಸಿಆರ್ ಪಿಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಜುಬೇರ್
ಜುಬೇರ್
ಮಂಗಳೂರು: ಕಾಶ್ಮೀರ ಕಣಿವೆಯಲ್ಲಿ ಕಳೆದ ಮೂರು, ನಾಲ್ಕು ದಿನಗಳಿಂಡ ಒಳ ನುಸುಳಿದ್ದ ಲಷ್ಕರ್-ಎ-ತೋಯ್ಬಾದ ಭಯೋತ್ಪಾದಕರನ್ನು ನಮ್ಮ ಸಿಆರ್ ಪಿಎಫ್ ಯೋಧರು ಹೊಡೆದುರುಳಿಸಿದ್ದಾರೆ. ಕರಣ್ ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಆರ್ ಪಿಎಫ್ ಯೋಧರ ತಂಡದಲ್ಲಿ ಕರ್ನಾಟಕದ ಕರಾವಳಿ ವೀರಯೋಧನೂ ಇದ್ದು ಉಗ್ರರೊಡನೆ ಹೋರಾಡಿದ ಅವರು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ನೇರಂಕಿ ಗ್ರಾಮದ ಜುಬೇರ್ ಕರಣ್ ನಗರದಲ್ಲಿ ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಇದೀಗ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. 
ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಜುಬೇರ್ ಮೊನ್ನೆ ನಡೆದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೋಯ್ಬಾದ ಉಗ್ರರು ನಿರ್ಮಾಣ ಹಂತದ ಕಟ್ಟಡದಲ್ಲಿ ಅಡಗಿ ಕುಳಿತಿದ್ದಾಗ ಕೆಲವೇ ಗಂಟೆಗಳಲ್ಲಿ ಉಗ್ರರನ್ನು ಹೊಡೆದುರುಳಿಸೋದರಲ್ಲಿ ಸಫಲರಾಗಿದ್ದರು.. 
ಚಿಕ್ಕಂದಿನಲ್ಲಿಯೇ ಸೇನೆಯನ್ನು ಸೇರಬೇಕೆನ್ನುವ ಆಸೆ ಹೊತ್ತಿದ್ದ ಜುಬೇರ್ ತಮ್ಮ ಸ್ವ ಪ್ರಯತ್ನದಿಂಡ ಸೇನೆಗೆ ಸೇರ್ಪಡೆಗೊಂಡಿದ್ದರು. ಇದೀಗ ದೇಶಕ್ಕೆ ಹೆಮ್ಮೆ ತಂದ ನಮ್ಮ ಕನ್ನಡ ನಾಡಿನ ಯೋಧನಿಗೆ ಒಂದು ಸಲಾಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com