ಸುಪ್ರೀಂ ತೀರ್ಪು ಸಮಾಧಾನ ತಂದಿದೆ: ಜಿ ಮಾದೇಗೌಡ; ಕರ್ನಾಟಕಕ್ಕೆ ಸಂದ ಜಯ: ಬಿವಿ ಆಚಾರ್ಯ

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಇಂದು ....
ಬಿ.ವಿ.ಆಚಾರ್ಯ ಮತ್ತು ಜಿ.ಮಾದೇಗೌಡ
ಬಿ.ವಿ.ಆಚಾರ್ಯ ಮತ್ತು ಜಿ.ಮಾದೇಗೌಡ
ಮಂಡ್ಯ: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ಕುರಿತು ಇಂದು ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಸಮಾಧಾನ ತಂದಿದೆ ಎಂದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. 
ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದುದರ ವಿರುದ್ಧ ಇಷ್ಟು ವರ್ಷಗಳ ಕಾಲ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದ ಅವರು, ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತೀರ್ಪು ಸಮಾಧಾನ ತಂದಿದ್ದು ಈ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ನೀರಾವರಿ ಪ್ರದೇಶ ಹೆಚ್ಚಳ, ಕುಡಿಯುವ ನೀರು ಬಳಕೆ ಕುರಿತು ಶನಿವಾರ ವಿವಿಧ ಸಂಘಟನೆಗಳ ಮುಖಂಡರ ಜತೆ ನಡೆಸಲಾಗುವುದು ಎಂದುಜಿ.ಮಾದೇಗೌಡ ತಿಳಿಸಿದ್ದಾರೆ. 
ಮತ್ತೊಂದೆಡೆ ಹಿರಿಯ ವಕೀಲ ಬಿ.ವಿ.ಆಚಾರ್ಯ ಪ್ರತಿಕ್ರಿಯೆ ನೀಡಿ, ಸುಪ್ರೀಂಕೋರ್ಟ್ ನ್ಯಾಯವಾದ ತೀರ್ಪು ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. 
ಈ ತೀರ್ಪು ಬಹಳ ಖುಷಿ ತಂದಿದೆ. ಬಹಳ ವರ್ಷಗಳ ನಂತರ ಒಳ್ಳೆಯ ತೀರ್ಪು ಬಂದಿದೆ.ಎರಡೂ ಕಡೆಯ ವಾದ- ಪ್ರತಿವಾದವನ್ನು ಪರಿಗಣಿಸಿ ಸುಪ್ರೀಂಕೋರ್ಟ್ ನ್ಯಾಯಸಮ್ಮತವಾದ ತೀರ್ಪನ್ನು ನೀಡಿದೆ ಎಂದು ಹೇಳಿದ್ದಾರೆ. 
ಬೆಂಗಳೂರಿಗರಿಗೆ ಅವಶ್ಯಕತೆಯಿರುವ ನೀರನ್ನು ಪರಿಗಣಿಸಿರುವುದು ನ್ಯಾಯಸಮ್ಮತವಾಗಿದೆ. ಇತಿಹಾಸದಲ್ಲಿ ಆದ ಅನ್ಯಾಯವನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಇದು ಕರ್ನಾಟಕಕ್ಕೆ ಸಂದ ಜಯ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com