ಮಹಾಮಸ್ತಕಾಭಿಷೇಕಕ್ಕೆ ಚಾಲನೆ: ಸಿಎಂ ಸಿದ್ದರಾಮಯ್ಯರಿಂದ ವೈರಾಗ್ಯಮೂರ್ತಿಗೆ ಜಲಾಭಿಷೇಕ

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಮುಖ್ಯಮಂತ್ರಿ...
ಜಲಾಭಿಷೇಕ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ
ಜಲಾಭಿಷೇಕ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ
ಹಾಸನ: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಶನಿವಾರ ಚಾಲನೆ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈರಾಗ್ಯಮೂರ್ತಿಗೆ ಜಲಾಭಿಷೇಕ ಮಾಡಿದರು.
ಇಂದು ಮಧ್ಯಾಹ್ನ ವರ್ಧಮಾನ ಸಾಗರ್‌ ಮಹಾರಾಜ್ ಅವರು ಈ ಶತಮಾನದ ಎರಡನೇ ಮಹಾ ಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಜೈನ ಮಹಾಮುನಿಗಳು, ಆಚಾರ್ಯರು ಮತ್ತು ಗಣ್ಯರು ಜಲಾಭಿಷೇಕ ಮಾಡುವ ಮೂಲಕ ವಿಧಿ ವಿಧಾನಗಳನ್ನು ಆರಂಭಿಸಿದ್ದಾರೆ.
ದೇಶದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಾರು ಮಂದಿ ಭಕ್ತರು  ಉಪಸ್ಥಿತರಿದ್ದು ಭಗವಾನ್‌ ಬಾಹುಬಲಿ ಕೀ ಜೈ ಎಂಬ ಘೋಷಗಳನ್ನು ಕೂಗಿದರು. ವರ್ಧಮಾನ ಸಾಗರ್‌ ಮುನಿ ಅವರು ಮೊದಲ ಜಲಾಭಿಷೇಕವನ್ನು ಮಾಡಿದರು. 
ಸಿದ್ದರಾಮಯ್ಯ ಜಲಾಭಿಷೇಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೋಲಿಯನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ  ಬಾಹುಬಲಿ  ಮೂರ್ತಿಗೆ ಜಲಾಭಿಷೇಕ ಮಾಡಿದರು. ಅವರೊಂದಿಗೆ ಸಚಿವ ಎ.ಮಂಜು, ಸಚಿವೆ ಉಮಾಶ್ರೀ ಅವರು ಭಾಗವಹಿಸಿದ್ದರು.
ಸಿಎಂ ಜಲಾಭಿಷೇಕ ನಡೆಸುವ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ , ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಜೊತೆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com