ರಾಜ್ಯದಲ್ಲಿ ಮೂರು ಜಿಲ್ಲೆ ಜನ ಮಾತ್ರ ಶುದ್ದ ಕನ್ನಡ ಮಾತನಾಡುತ್ತಾರೆ: ಅನಂತ್ ಕುಮಾರ್ ಹೆಗಡೆ
"ಕರ್ನಾಟದಲ್ಲಿ ಶುದ್ದ ಕನ್ನಡ ಮಾತನಾಡುವವರೇ ಇಲ್ಲವಾಗುತ್ತಿದ್ದಾರೆ. ಎಲ್ಲೋ ಒಂದೆಡೆ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ ಇತರೆಡೆಯವರಿಗೆ........
ಪುತ್ತೂರು: "ಕರ್ನಾಟದಲ್ಲಿ ಶುದ್ದ ಕನ್ನಡ ಮಾತನಾಡುವವರೇ ಇಲ್ಲವಾಗುತ್ತಿದ್ದಾರೆ. ಎಲ್ಲೋ ಒಂದೆಡೆ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ ಇತರೆಡೆಯವರಿಗೆ ಆ ಯೋಗ್ಯತೆ ಇಲ್ಲವಾಗಿದೆ" ಕೇಂದ್ರ ಕೌಶಲ್ಯ ಅಭಿವೃದ್ದಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ಪ್ರಾರಂಭವಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷಾ ಶುದ್ದತೆ ಇಲ್ಲದವರಿಗೆ ಕನ್ನಡ ಮಾತನಾಡುವ ಯೋಗ್ಯತೆ ಇಲ್ಲ ಎನ್ನುವ ಮೂಲಕ ಅನಂತ್ ಕುಮಾರ್ ಹೆಗಡೆ ವಿವಾದವನ್ನು ಸೃಷ್ಟಿಸಿದ್ದಾರೆ. ಬೆಂಗಳೂರಿನ ಪರಿಸ್ಥಿತಿಯಂತು ಘೇಳುವ ಅಗತ್ಯವೇ ಇಲ್ಲ ಅವರು ಹೇಳಿದರು.
ರಾಜ್ಯ ಸರ್ಕಾರಕ್ಕೆ ಬೇಸಿಕ್ ಸ್ಕಿಲ್ ಕೊರತೆ
ಕರ್ನಾಟಕದಲ್ಲಿನ ಸಿದ್ದರಾಮಯ್ಯ ಸರ್ಕಾರಕ್ಕೆ ಬೇಸಿಕ್ ಸ್ಕಿಲ್ ಇಲ್ಲ ಎಂದ ಸಚಿವರು "ರೀಜನಲ್ ಸ್ಕಿಲ್ ಗ್ಯಾಪ್ ಎನಾಲಿಸಿಸ್ ಉದ್ದೇಶದೊಡನೆ ಕೇಂದ್ರವು ರಾಜ್ಯಕ್ಕೆ ಅನುದಾನ ನಿಡಿದೆ. ಇದನ್ನು ಕಾಂಗ್ರೆಸ್ ಸರ್ಕಾರ ಹೇಗೆ ಉಪಯೋಗಿಸಿಕೊಳ್ಳುತ್ತದೆ ನೋಡಬೇಕು. ಬೇಸಿಕ್ ಸ್ಕಿಲ್ ಇಲ್ಲದವರು ಸ್ಕಿಲ್ ಗ್ಯಾಪ್ ಅನಾಲಿಸಿಸ್ ಹೇಗೆ ನಡೆಸಬಲ್ಲರು?" ಸಚಿವರು ವ್ಯಂಗ್ಯ ಮಾಡಿದ್ದಾರೆ.