ದಕ್ಷಿಣ ಕನ್ನಡ: ಪ್ರೀತಿ ನಿರಾಕರಿಸಿದ್ದಕ್ಕೆ ಸಹಪಾಠಿಯನ್ನೇ ಕೊಂದನು!

ತನ್ನ ಪ್ರೀತಿ ನಿರಾಕರಿಸಿದ ಪದವಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ....
ಅಕ್ಷತಾ
ಅಕ್ಷತಾ
Updated on: 
ಮಂಗಳೂರು: ತನ್ನ ಪ್ರೀತಿ ನಿರಾಕರಿಸಿದ ಪದವಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳವಾರ ದಕ್ಷಿಣ ಕನ್ನಡ‌ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಕೊಲೆಯಾದ ವಿದ್ಯಾರ್ಥಿನಿ ಸುಳ್ಯ ಎನ್ಎಂಸಿ ಕಾಲೇಜ್ ನಲ್ಲಿ ದ್ವಿತೀಯ ಬಿಎಸ್ಪಿ ಓದುತ್ತಿದ್ದ ಅಕ್ಷತಾ ಎಂದು ಗುರುತಿಸಲಾಗಿದ್ದು, ಇದೇ ಕಾಲೇಜ್ ನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಕಾರ್ತಿಕ್ ಕೊಲೆ‌ ಮಾಡಿದ ಆರೋಪಿ. 
ಇಂದು ಮಧ್ಯಾಹ್ನ 4.30ರ ಸುಮಾರಿಗೆ ಕಾಲೇಜು ಮುಗಿಸಿ ವಾಪಸು ಮನೆಗೆ ಹೋಗುತ್ತಿದ್ದಾಗ ರೋಟರಿ ಶಾಲೆಯ ಬಳಿ ಕಾರ್ತಿಕ್ ಅಕ್ಷತಾ ಕುತ್ತಿಗೆಗೆ ಏಳು ಚೂರಿಯಿಂದ ಇರಿದಿದ್ದಾನೆ. ಬಳಿಕ ತಾನೂ ತನ್ನ ಕೈ ಮಣಿಕಟ್ಟನ್ನು ಚೂರಿಯಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗಾಯ ಮಾಡಿಕೊಂಡಿರುವ ಕಾರ್ತಿಕ್‌ ನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರೇಮ ವೈಫಲ್ಯವೇ ಘಟನೆಗೆ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಡಾ.ಬಿ.ಆರ್.ರವಿಕಾಂತೇಗೌಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com