ಶಾಸಕ ಹ್ಯಾರಿಸ್ ಪುತ್ರನನ್ನು ಸಾಮಾನ್ಯ ಆರೋಪಿಯಂತೆ ಕಾಣದೆ ರಾಜಾತಿಥ್ಯ ನೀಡುತ್ತಿರುವ ಪೊಲೀಸರು?

ಹಲ್ಲೆ ಪ್ರಕರಣದ ಆರೋಪದಲ್ಲಿ ಪೊಲೀಸರಿಗೆ ಶರಣಾಗಿರುವ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್‌ ಗೆ ಪೊಲೀಸರು ಠಾಣೆಯಲ್ಲೇ ರಾಜಾತಿಥ್ಯ ನೀಡುತ್ತಿದ್ದಾರೆ ...
ಪೊಲೀಸರೊಂದಿಗೆ ನ್ಯಾಯಾಲಯಕ್ಕೆ ಆಗಮಿಸುತ್ತಿರುವ ಮೊಹಮದ್ ನಲಪಾಡ್
ಪೊಲೀಸರೊಂದಿಗೆ ನ್ಯಾಯಾಲಯಕ್ಕೆ ಆಗಮಿಸುತ್ತಿರುವ ಮೊಹಮದ್ ನಲಪಾಡ್
ಬೆಂಗಳೂರು: ಹಲ್ಲೆ ಪ್ರಕರಣದ ಆರೋಪದಲ್ಲಿ ಪೊಲೀಸರಿಗೆ ಶರಣಾಗಿರುವ ಶಾಸಕ ಎನ್ ಎ ಹ್ಯಾರಿಸ್ ಪುತ್ರ  ಮೊಹಮದ್‌ ಗೆ ಪೊಲೀಸರು ಠಾಣೆಯಲ್ಲೇ ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಘಟನೆ ನಡೆದು 24 ಗಂಟೆ ಕಳೆದರೂ ಭಾನುವಾರ ಸಂಜೆ  ಆರೋಪಿಯ ಸಹಚರರನ್ನು ಬಂಧಿಸಿದ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿ ಮಹಮಹದ್ ಇರುವ ಜಾಗ ಗೊತ್ತಿದ್ದರೂ  ಬಂಧಿಸಲಿಲ್ಲ. 
ಸೋಮವಾರ ಬೆಳಗ್ಗೆ ಶಾಸಕ ಹ್ಯಾರಿಸ್ ಮನೆಗೆ ಪೊಲೀಸರ ತಂಡ ಭೇಟಿ ನೀಡಿ ಮಹಮದ್ ಗಾಗಿ ಪರಿಶೀಲನೆ ನಡೆಸಿತು. ಈ ವೇಳೆ ತಾವೇ ಬುದ್ದಿ ಹೇಳಿ ತಮ್ಮ ಮಗನನ್ನು ಶರಣಾಗತಿ ಮಾಡಿಸುವುದಾಗಿ ಹ್ಯಾರಿಸ್ ಭರವಸೆ ನೀಡಿದರು. ಶಾಸಕರ ಮಾತಿನ ಮೇಲೆ ನಂಬಿಕೆ ಇಟ್ಟ ಪೊಲೀಸ್ ತಂಡ ಅವರ ಮನೆಯಿಂದ ವಾಪಾಸಾಯಿತು. ಇದಾದ 1 ಗಂಟೆಯ ನಂತರ ಮೊಹಮದ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಆದರೆ ಪೊಲೀಸರಿಗೆ ಶರಣಾದ ಮೊಹಮದ್ ನನ್ನು ಪೊಲೀಸರು ಸಾಮಾನ್ಯಆರೋಪಿಯಂತೆ ಪರಿಗಣಿಸದೇ ಆತನಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ  ಆರೋಪಗಳು ಕೇಳಿ ಬರುತ್ತಿವೆ. ಕಬ್ಬನ್‌ ಪಾರ್ಕ್‌ ಠಾಣೆಗೆ ಸಿಸಿಬಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಯುಬಿ ಸಿಟಿ ಮಾಲ್ ಗೆ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ.
ಮಧ್ಯಾಹ್ನ 1.30 ರ ವೇಳೆಗೆ ಮೊಹಮದ್‌ ಠಾಣೆಗೆ ಶರಣಾಗಲು ಬಂದಾಗ, ಸ್ಥಳದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಅವರ ಪರ ಘೋಷಣೆ ಕೂಗಿದರು.  ಪ್ರಿನ್ಸ್ ನಲಪಾಡ್ ಎಂದು ಘೋಷೆ ಕೂಗಿದರು. ಈ ವೇಳೆ ಮೊಹಮದ್ ಬರುವುದನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮಗಳ ಕ್ಯಾಮೆರಾಗಳನ್ನು ಎಳೆದಾಡಲಾಯಿತು. ಕೆಲವರು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದರು. ಈ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಬಲವಂತವಾಗಿ ಮಾಧ್ಯಮಗಳ ಕ್ಯಾಮೆರಾಮನ್ ಗಳನ್ನು ಕಳುಹಿಸಲಾಯಿತು, 
ಇನ್ನೂ ಹಲ್ಲೆಯಿಂದ ಗಾಯಗೊಂಡಿರುವ ವಿದ್ವತ್ ಗೆ ಮೂಗಿನ ಮೂಳೆ ಮರಿದಿದೆ. ಮಲ್ಯ ಆಸ್ಪತ್ರೆ  ವೈದ್ಯರು ಸರ್ಜರಿ ಮಾಡುವ ಬದಲು ಸ್ವಾಭಾವಿಕವಾಗಿಯೇ ಗಾಯ ವಾಸಿಯಾಗುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ, 4 ವಾರಗಳಲ್ಲಿ ಗಾಯ ವಾಸಿಯಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com