ಚಳ್ಳಕೆರೆ: ಡಿಆರ್​ಡಿಒ ಗೆ ಸೇರಿದ ಡ್ರೋನ್ ಪತನ

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ದೊರೆಮಂದಲಹಟ್ಟಿ ಗ್ರಾಮದ ತೋಟದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್​​ಡಿಒ)ಗೆ ಸೇರಿದ್ದ ಡ್ರೋನ್ ಒಂದು ಪತನಗೊಂಡಿದೆ.
ಡಿಆರ್​ಡಿಒ ಗೆ ಸೇರಿದ ಡ್ರೋನ್ ಪತನ
ಡಿಆರ್​ಡಿಒ ಗೆ ಸೇರಿದ ಡ್ರೋನ್ ಪತನ
ಚಿತ್ರದುರ್ಗ: ಚಿತ್ರದುರ್ಗದ ಚಳ್ಳಕೆರೆ  ತಾಲೂಕಿನ ದೊರೆಮಂದಲಹಟ್ಟಿ ಗ್ರಾಮದ ತೋಟದಲ್ಲಿ  ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್​​ಡಿಒ)ಗೆ ಸೇರಿದ್ದ ಡ್ರೋನ್ ಒಂದು ಪತನಗೊಂಡಿದೆ.
ಅನುಮಾನಾಸ್ಪದ ವ್ಯಕ್ತಿಗಳನ್ನು  ಪತ್ತೆ ಮಾಡಲು ಹಾಗೂ ರಕ್ಷಣಾ ಮಾಹಿತಿ ಸೋರಿಕೆಯನ್ನು ತಡೆಗಟ್ಟಲು ಡಿಆರ್​ಡಿಒ ಈ ಡ್ರೋನ್ ಹಾರಿ ಬಿಟ್ಟಿತ್ತೆಂದು ಹೇಳಲಾಗಿದೆ.
ಡಿಆರ್‌ಡಿಒ  ಕೇಂದ್ರದಿಂದ ಮೂರು ಕಿಮೀ ದೂರದಲ್ಲಿದ್ದ  ದೊರೆಮಂದಲಹಟ್ಟಿ ಗ್ರಾಮದ ಬಂಗಾರಪ್ಪ ಎನ್ನುವವರ ತೋಟದಲ್ಲಿ ಡ್ರೋನ್ ಬಿದ್ದಿದೆ. ಬುಧವಾರ ಬೆಳಗ್ಗೆ ಈ ಡ್ರೋನ್ ಪತನವಾಗಿದ್ದು ಡಿಆರ್‌ಡಿಒ  ವಿಜ್ಞಾನಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಡ್ರೋನ್, ಕೇಂದ್ರದ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತ್ತು. 
ಘಟನಾ ಸ್ಥಳಕ್ಕೆ ನಾಯಕನಹಟ್ಟಿ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com