ಎಲ್ಲರ ಗಮನ ಸೆಳೆಯುತ್ತಿದೆ ಗೊಮ್ಮಟಮೂರ್ತಿ ಮೇಲಿರುವ ಚಿನ್ನದ ಲೇಪಿತ 'ಛತ್ರಿತ್ರಿಯಾ'

ಶ್ರವಣಬೆಳಗೊಳದ ವಿಂದ್ಯಾಗಿರಿ ಪರ್ವತದ ಮೇಲಿರುವ 58 ಅಡಿ ಏಕಶಿಲಾ ವಿಗ್ರಹದ ಮೇಲಿರುವ ಸ್ವರ್ಣಲೇಪಿತ ಛತ್ರಿ ಎಲ್ಲರ ಆಕರ್ಷಣೆಯ ಕೇಂದ್ರ ...
ಗೊಮ್ಮಟೇಶ್ವರ ಮೂರ್ತಿ ಮೇಲಿರುವ ಚಿನ್ನ ಲೇಪಿತ ಛತ್ರಿ
ಗೊಮ್ಮಟೇಶ್ವರ ಮೂರ್ತಿ ಮೇಲಿರುವ ಚಿನ್ನ ಲೇಪಿತ ಛತ್ರಿ
ಶ್ರವಣಬೆಳಗೊಳ: ಶ್ರವಣಬೆಳಗೊಳದ ವಿಂದ್ಯಾಗಿರಿ ಪರ್ವತದ ಮೇಲಿರುವ 58 ಅಡಿ ಏಕಶಿಲಾ ವಿಗ್ರಹದ ಮೇಲಿರುವ ಸ್ವರ್ಣಲೇಪಿತ ಛತ್ರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ತ್ಯಾಗಮೂರ್ತಿಯ ತಲೆಯ ಮೇಲಿರುವ ಈ ಸ್ವರ್ಣಲೇಪನ ಮುಕುಟ ಸೂರ್ಯನ ಬೆಳಕಿನಿಂದ ಮತ್ತಷ್ಟು ಹೊಳೆಯುತ್ತಿದೆ. ಗೊಮ್ಮಟೇಶ್ವರನನ್ನು ನೋಡಲು ಬರುವ ಪ್ರವಾಸಿಗರು ಇದನ್ನು ನೋಡದೇ ಹೋಗಲು ಸಾಧ್ಯವಿಲ್ಲ,  ಇದನ್ನು ಛತ್ರಿತ್ರಿಯಾ ಎಂದು ಸಹ ಕರೆಯಲಾಗುತ್ತದೆ,  ಈ ಮಕುಟದ ಮೇಲೆ ಒಂದರ ಮೇಲೊಂದು ಮೂರು ಛತ್ರಿಗಳಿವೆ. ಈ ಛತ್ರಿಗಳನ್ನು ತಾಮ್ರ ಮತ್ತು ಕಂಚಿನೊಂದಿಗೆ ಕೆತ್ತಲಾಗಿದ್ದು. ಚಿನ್ನದ ಲೇಪನ ಮಾಡಲಾಗಿದೆ. 
ತಾಮ್ರದ ಶೀಟುಗಳಿಂದ ಇದನ್ನು ತಯಾರಿಸಲಾಗಿದ್ದು, ಒಂದರ ಮೇಲೊಂದನ್ನು ಜೋಡಿಸಲಾಗಿದೆ, ತಳಭಾಗದ ಛತ್ರಿ 18 ಅಡಿ ಅಗಲವಿದೆ, ಮಧ್ಯ ಭಾಗದ್ದು 12 ಅಡಿ, ಅತಿ ಮೇಲಿರುವ ಛತ್ರಿ 9 ಅಡಿ ಅಗಲವಿದೆ. ಈ ಮೂರು ಛತ್ರಿಗಳ ಮೇಲೆ ಬಂಗಾರದ ಕಳಸ ಜೋಡಿಸಲಾಗಿದೆ. 
ಮಂಗಳೂರು ಮೂಲದ 30 ಮಂದಿ ತಯಾರಕರು ಇದನ್ನು ಕೆತ್ತಿದ್ದಾರೆ. ಗೋವರ್ದನ್ ಮೆಟಲ್ಸ್ ಈ ಛತ್ರಿಯನ್ನು ತಯಾರಿಸಿದೆ. ಇದು 1,275 ಕೆಜಿ ತೂಕವಿದ್ದು, 4 ತಿಂಗಳ ಕಾಲ ಇದನ್ನು ತಯಾರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com