ಚಿಕ್ಕಮಗಳೂರು: ಮೋದಿ ಮೆಚ್ಚುಗೆ ಪಡೆದಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಬಿಜೆಪಿಯಿಂದ ಅಮಾನತು

ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಅವರನ್ನು ಭಾರತೀಯ ಜನತಾ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಚೈತ್ರಶ್ರೀ
ಚೈತ್ರಶ್ರೀ
ಚಿಕ್ಕಮಗಳೂರು: ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪದ ಮೇಲೆ  ಚಿಕ್ಕಮಗಳೂರು  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಅವರನ್ನು ಭಾರತೀಯ ಜನತಾ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಪಕ್ಷದ ಆಂತರಿಕ ನಿಯಮಕ್ಕೆ ಬಾಹಿರವಾಗಿ  20 ತಿಂಗಳು ಅವಧಿ ಮುಗಿದ ಬಳಿಕ ಸಹ  ಚೈತ್ರಶ್ರೀ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು. ಪಕ್ಷದ ವರಿಷ್ಠರ ಸೂಚನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ 
ಪಕ್ಷದ ಆದೇಶ ಪಾಲಿಸದಿರುವುದರಿಂದ ಚೈತ್ರಶ್ರೀ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಹಿ ಮಾಡಿರುವ ಅಮಾನತು ಆದೇಶವನ್ನು ಚೈತ್ರಶ್ರೀ ಅವರಿಗೆ ಕಳುಹಿಸಲಾಗಿದೆ. ಸದ್ಯ ಚೈತ್ರಶ್ರೀ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ಚೈತ್ರಶ್ರೀ ಅವರು ನಕ್ಸಲ್ ಪೀಡಿತ ಗ್ರಾಮಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಪ್ರಧಾನಿಗಳ ಮೆಚ್ಚುಗೆ ಗಳಿಸಿದ್ದರು.
ಪ್ರಧಾನಿ ಮೋದಿಯವರ ಭೇಟಿಗೆ ಅವಕಾಶ ಕೇಳಿದ್ದ ಚೈತ್ರಶ್ರೀ ಅವರಿಗೆ ಭೇಟಿಗೆ ಅವಕಾಶ ನೀಡುವುದಾಗಿ ತಿಳಿಸಿ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿತ್ತು. ಜಿಲ್ಲೆಯಲ್ಲಿರುವ ನಕ್ಸಲ್ ಸಮಸ್ಯೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಪ್ರಧಾನಿಗಳ ಜತೆ  ಮಾತುಕತೆ ನಡೆಸಲು ಅವರು ಸಿದ್ದವಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com