ರಾಯಚೂರು: ಹೆದ್ದಾರಿ ವಿಸ್ತರಣೆಗೆ ರಾಮ ಮಂದಿರ, ಮಸೀದಿ ಏಕ ಕಾಲಕ್ಕೆ ತೆರವು

ರಾಯಚೂರು ನಗರಸಭೆ ಅಧಿಕಾರಿಗಳು ರಾತ್ರೋರಾತ್ರಿ ರಾಷ್ಟ್ರೀಯ ಹೆದ್ದಾರಿ(ಸಂಖ್ಯೆ 167) ವಿಸ್ತರಣೆ ಕಾಮಗಾರಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಯಚೂರು: ರಾಯಚೂರು ನಗರಸಭೆ ಅಧಿಕಾರಿಗಳು ರಾತ್ರೋರಾತ್ರಿ ರಾಷ್ಟ್ರೀಯ ಹೆದ್ದಾರಿ(ಸಂಖ್ಯೆ 167) ವಿಸ್ತರಣೆ ಕಾಮಗಾರಿಯಲ್ಲಿ ಅಡ್ಡಲಾಗಿದ್ದ ನಗರದ ರಾಮಮಂದಿರ ಹಾಗೂ ಅಂಬೇಡ್ಕರ್ ವೃತ್ತ ಪಕ್ಕದ ಮಸೀದಿ ಎರಡನ್ನೂ ಏಕಕಾಲಕ್ಕೆ ತೆರವು ಮಾಡಿದ್ದಾರೆ.
ನಿನ್ನೆ ರಾತ್ರಿ ಮಂದಿರ ಹಾಗೂ ಮಸೀದಿಯ ಸುಮಾರು ಆರು ಅಡಿಗಳಷ್ಟು ಭಾಗವನ್ನು ಒಡೆದು ಹಾಕಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ರಾತ್ರಿಯಿಂದಲೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಹಿತಕರ ಘಟನೆ ನಡೆದ ಬಗ್ಗೆ ಇದುವರೆಗೂ ವರದಿಯಾಗಿಲ್ಲ, ತೆರವು ಕಾರ್ಯಾಚರಣೆ ಸುಗಮವಾಗಿ ನಡೆದಿದೆ.
ಸ್ಥಳದಲ್ಲಿ ಪೊಲೀಸ್ ಬಸ್ ಬಿಡುಬಿಟ್ಟಿದೆ. ಈ ಹಿಂದೆ ಅನೇಕ ಸಲ ತೆರವು ಕಾರ್ಯಾಚರಣೆ ಮಾಡುವಾಗ ಆಯಾ ಧರ್ಮದ ಜನರು ಅಡ್ಡಿಪಡಿಸಿದ್ದರು. ತಾವೇ ತೆರವು ಮಾಡಿಕೊಡುತ್ತೇವೆ ಎನ್ನುವ ವಾಗ್ದಾನವನ್ನು ಮಂದಿರ ಹಾಗೂ ಮಸೀದಿ ಮಂಡಳಿ ಕಡೆಯವರು ನೀಡಿದ್ದರು.
ಗಡುವು ಮೀರಿದರೂ ತೆರವು ಮಾಡಿಕೊಳ್ಳದ ಕಾರಣ, ಈ ಸಲ ಯಾವುದೆ ಮನ್ಸೂಚನೆಯನ್ನು ಅಧಿಕಾರಿಗಳು ನೀಡಿದಂತಿಲ್ಲ. ಮಸೀದಿ ಹಾಗೂ ಮಂದಿರ ಕಟ್ಟಡಗಳ ಭಾಗವನ್ನು ಜೆಸಿಬಿ ಯಂತ್ರದಿಂದ ಒಡೆದು ಹಾಕಲಾಗಿದೆ. ಕಟ್ಟಡಗಳ ಅವಶೇಷ ಇನ್ನೂ ಎತ್ತಿ ಹಾಕಿಲ್ಲ. 
ಸರ್ಕಾರಿ ಐ.ಬಿ.ಯಿಂದ ಬಸವೇಶ್ವರ ವೃತ್ತದವರೆಗೂ ಎರಡು ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ಸಿಸಿ ರಸ್ತೆ ಮಾಡಲಾಗಿದೆ. ಇದೇ ಮಾರ್ಗದಲ್ಲಿರುವ ರಾಮಮಂದಿರ ಹಾಗೂ ಮಸೀದಿ ಇರುವ ಕಡೆ ಸಿಸಿ ರಸ್ತೆಗೆ ಹೊಂದಿಕೊಂಡು ಚರಂಡಿ ಹಾಗೂ ಪಾದರಸ್ತೆ ನಿರ್ಮಾಣ ಬಾಕಿ ಉಳಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com