ಮತ್ತಿನಲ್ಲಿದ್ದ ಶಾಸಕ ಹ್ಯಾರಿಸ್ ಪುತ್ರನಿಂದ ವಿದ್ವತ್ ಮೇಲೆ ಹಲ್ಲೆ? ನಗರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಗಾಂಜಾ ಮಾರಾಟ!

ಶಾಂತಿನಗರ ಶಾಸಕ ಎನ್, ಎ ಹ್ಯಾರಿಸ್ ಪುತ್ರ ಮೊಹಮದ್ ಮತ್ತು ಆತನ ಸ್ನೇಹಿತರು ಗಾಂಜಾ ಮತ್ತಿನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿರಬಹುದು ಎಂದು ...
ಮೊಹಮದ್ ಹ್ಯಾರಿಸ್
ಮೊಹಮದ್ ಹ್ಯಾರಿಸ್
Updated on
ಬೆಂಗಳೂರು: ಶಾಂತಿನಗರ ಶಾಸಕ ಎನ್, ಎ ಹ್ಯಾರಿಸ್ ಪುತ್ರ ಮೊಹಮದ್ ಮತ್ತು ಆತನ ಸ್ನೇಹಿತರು ಗಾಂಜಾ ಮತ್ತಿನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿರಬಹುದು ಎಂದು ಮಾಜಿ ಡಿಸಿಎಂ ಆರ್ ಆಶೋಕ ಹೇಳಿದ್ದಾರೆ. 
ಪೊಲೀಸರು ಈ ದಿಸೆಯಲ್ಲಿಯೂ ಪ್ರಕರಣದ ತನಿಖೆ ನಡೆಸಬೇಕು ಎಂದು ಆರ್ ಅಶೋಕ್ ಒತ್ತಾಯಿಸಿದ್ದಾರೆ. ಹ್ಯಾರಿಸ್ ಮತ್ತವನ ಸ್ನೇಹಿತರು ಗಾಂಜಾ ಅಥವಾ ಡ್ರಗ್ಸ್ ಸೇವಿಸಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಸಾಧ್ಯತೆಯಿದೆ. ಪೊಲೀಸರು ಆತನಿಗೆ ನಾರ್ಕೋ ಅನಾಲಿಸ್ಟ್ ಟೆಸ್ಟ್ ಮಾಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. 
ವಿದ್ವತ್ ಮೇಲೆ ಮೊದಲು ಫರ್ಜಿ ಕೆಫೆ ಮತ್ತು ನಂತರ ಪಾರ್ಕಿಂಗ್ ಸ್ಥಳದಲ್ಲಿ ಹಲ್ಲೆ ನಡೆಸಲಾಗಿದೆ. ಪದೇ ಪದೇ ಹಲ್ಲೆ ಮಾಡಿದ್ದಾನೆ ಎಂದು ಹೇಳಿರುಲ ಅವರು ಪೊಲೀಸರು ಇದುವರೆಗೂ ಮೊಹಮದ್ ಗೆ ಡ್ರಗ್ಸ್ ಅಥವಾ ಗಾಂಜಾ ಸೇವನೆ ಬಗ್ಗೆ ಪರೀಕ್ಷೆ ನಡೆಸದಿರುವುದಕ್ಕೆ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. 
ಬೆಂಗಳೂರು ನಗರದಲ್ಲಿ ಗಾಂಜಾ ಮಾರಾಟ ಅತಿರೇಕಕ್ಕೆ ತಲುಪಿದೆ ಎಂದು ಆರೋಪಿಸಿರುವ ಅವರು, ಇತ್ತೀಚೆಗೆ ಸಿಟಿ ಪೊಲೀಸರು ಸುಮಾರು 130 ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ ಎಂದರೇ ಈ ಜಾಲ ಎಲ್ಲಿಯವರೆಗೂ ಹಬ್ಬಿದೆ ಎಂದು ಪ್ರಶ್ನಿಸಿದ್ದಾರೆ. 
ಗಾಂಜಾ ಮಾರಾಟ ಜಾಲವನ್ನು ವಿರೋಧಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರುಗಳಾದ ರಾಮಸ್ವಾಮಿ ಪಾಳ್ಯದ ಸಂತೋಷ್.ಮತ್ತು ಬಿಜೆಪಿ ಕಾರ್ಪೋರೇಟರ್ ರೇಖಾ ಪತಿ ಕದಿರೇಶ್ ಅವರನನ್ನು ಕೊಲ್ಲಲಾಯಿತು ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com