ಬೆಂಗಳೂರು: ಸಾರಸ್ ಲಘು ವಿಮಾನದ ಎರಡನೇ ಪರೀಕ್ಷಾರ್ಥ ಹಾರಾಟ ಯಶಸ್ವಿ

ಭಾರತ ಸ್ವದೇಶೀ ನಿರ್ಮಾಣದ ಲಘು ಯುದ್ಧ ವಿಮಾನ ’ಸಾರಸ್’ ಎರಡನೇ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ.
ಬೆಂಗಳೂರು: ಸಾರಸ್ ಲಘು ವಿಮಾನದ ಎರಡನೇ ಪರೀಕ್ಷಾರ್ಥ ಹಾರಾಟ  ಯಶಸ್ವಿ
ಬೆಂಗಳೂರು: ಸಾರಸ್ ಲಘು ವಿಮಾನದ ಎರಡನೇ ಪರೀಕ್ಷಾರ್ಥ ಹಾರಾಟ ಯಶಸ್ವಿ
Updated on
ಬೆಂಗಳೂರು: ಭಾರತ ಸ್ವದೇಶೀ ನಿರ್ಮಾಣದ ಲಘು ಯುದ್ಧ ವಿಮಾನ ’ಸಾರಸ್’ ಎರಡನೇ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ.
ಸಾರಸ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲು ತಯಾರಿ ನಡೆದಿದ್ದು ಮೊದಲ ಹಂತದಲ್ಲಿ ಒಟ್ಟು 15 ವಿಮಾನಗಳನ್ನು ಖರೀದಿಸಲು ಸಿದ್ದತೆ ನಡೆದಿದೆ.
ಬೆಂಗಳುರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಸಾರಸ್ (ಎಸ್.ಎ.ಆರ್.ಎ.ಎಸ್) ವಿಮಾನದ ಪರೀಕ್ಷಾರ್ಥ ಹಾರಾಟ ನಡೆದಿದೆ. ವಾಯು ಪಡೆಯ ಗ್ರೂಪ್ ಕ್ಯಾಪ್ಟನ್‌ಗಳಾದ ಆರ್.ವಿ.ಪಣಿಕ್ಕರ್ ಮತ್ತು ಕೆ.ಪಿ.ಭಟ್ ವಿಮಾನ ಹಾರಾಟ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ ಮತ್ತು ಸಿಎಸ್‌ಐಆರ್‌ ಒಟ್ಟಾಗಿ ಈ ಲಘು ವಿಮಾನವನ್ನು ಅಭಿವೃದ್ಧಿಪಡಿಸಿದ್ದು ಇದರ ಮೊದಲ ಪರೀಕ್ಷಾರ್ಥ ಹಾರಾಟ ಜನವರಿ 24 ರಂದು ಯಶಸ್ವಿಯಾಗಿ ನಡೆದಿತ್ತು. ಮುಂದಿನ ಜೂನ್, ಜುಲೈನಲ್ಲಿ ನೂತನ ಮಾದರಿಯ ವಿಮಾನವನ್ನು ವಾಯುದಳಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ.
2009 ರಲ್ಲಿ ಪರೀಕ್ಷಾ ಹಾರಾಟದ ವೇಳೆ ಸಾರಸ್‌ ಅಪಘಾತಕ್ಕೀಡಾಗಿತ್ತು. ಇದೇ ಕಾರಣಕ್ಕೆ ಅಂದಿನ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಆದರೆ ನರೇಂದ್ರ ಮೋದಿ ನಾಯಕತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ’ಮೇಕ್ ಇನ್ ಇಂಡಿಯಾ’ ಯೋಜನೆಯಡಿಯಲ್ಲಿ ಈ ಯೋಜನೆಯನ್ನು ಪುನಾರಂಭಗೊಳಿಸಿದೆ ಎಂದು ಕೇಂದ್ರ ಸಚಿವ  ಡಾ.ಹರ್ಷವರ್ಧನ್‌ ಹೇಳಿದ್ದಾರೆ.
ಸುಧಾರಿತ ಸಾರಸ್ ವಿಮಾನವು 19 ಸೀಟುಗಳನ್ನು ಹೊಂದಿದ್ದು ಒಂದು ವಿಮಾನದ ಬೆಲೆ 40 ರಿಂದ 45 ಕೋಟಿ. ರೂ. ಆಗಲಿದೆ. ಈ ವಿಮಾನವು ಇದೇ ಶ್ರೇಣಿಯ ಇತರೆ ವಿಮಾನಗಳಿಗಿಂತ ಹೆಚ್ಚು ಉಪಯುಕ್ತವಾಗಿದೆ ಎಂದು ಹರ್ಷವರ್ಧನ್‌ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com