ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಚಾಟಿ ಬೀಸಿದ ಸಿಎಜಿ

2017ರ ಸಾಲಿನ ಆಡಿಟ್ ವರದಿಗಳನ್ನು ಅಕೌಂಟೆಂಟ್ ಜನರಲ್ (ಎಕನಾಮಿಕ್ ಅಂಡ್ ರೆವಿನ್ಯೂ ಸೆಕ್ಟರ್) ಗೆ ರಾಜ್ಯ ಸರ್ಕಾರ ಸಲ್ಲಿಸಿದ್ದು ಈ ವೇಳೆ ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 2017ರ ಸಾಲಿನ ಆಡಿಟ್ ವರದಿಗಳನ್ನು ಅಕೌಂಟೆಂಟ್ ಜನರಲ್ (ಎಕನಾಮಿಕ್ ಅಂಡ್ ರೆವಿನ್ಯೂ ಸೆಕ್ಟರ್)  ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು ಈ ವೇಳೆ ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ  ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಗಳು ಆಡಿಟರ್ ವಿಭಾಗದವರಿಂದ ತೀವ್ರ ಟೀಕೆಗೆ ಒಳಗಾಗಿದೆ.
ಕೆಐಅಡಿಬಿ ಹಾಗೂ ಕೀಸ್ ಪಿಸಿಬಿ ಎರಡೂ ಸಂಸ್ಥೆಗಳ ಕಾರ್ಯಚಟುವಟಿಕೆಗಳಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆದಿದೆ ಎಂದು ಆಡಿಟ್ ವರದಿ ಬಹಿರಂಗಪಡಿಸಿದೆ."2011-12 ಮತ್ತು 2016-17ರ ಎರಡೂ ಅವಧಿಯಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಅಕ್ರಮಗಳು ನಡೆದಿದೆ.ಪ್ರಾಥಮಿಕ ಅಧಿಸೂಚನೆಯ ಅಡಿಯಲ್ಲಿ 28,719 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಇನ್ನೊಂದೆಡೆ ಒಂದು ಲಕ್ಷ ಎಕರೆಗೆ ಬದಲು 1.15 ಲಕ್ಷ ಎಕರೆಗಳನ್ನು ಸ್ವಾಧೀನ ಪ್ರಕ್ರಿಗೆಗಾಗಿ ಗುರುತಿಸಲಾಗಿದೆ. ಆದರೆ ಇದುವರೆಗೆ ಸ್ವಾಧೀನ ಪ್ರಕ್ರಿಗೆ ಒಳಪಟ್ಟ ಭೂಮಿಯಲ್ಲಿ ಯಾವುದೇ ಉತ್ತಮ ಚಟುವಟಿಕೆಯನ್ನು ಕೈಗೊಂಡಿಲ್ಲ. ಒಟ್ಟಾರೆ ಭೂ ಸ್ವಾಧೀನ ಪ್ರಕ್ರಿಯೆ ಕಳಪೆಯಾಗಿದೆ. ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಅತ್ಯಂತ ಕೆಟ್ಟದಾಗಿದೆ.:" ಎಂದು ಅಕೌಂಟೆಂಟ್ ಜನರಲ್ (ಇ ಮತ್ತು ಆರ್ ಎಸ್) ಬಿ.ಕೆ. ಮುಖರ್ಜಿಹೇಳಿದ್ದಾರೆ.
ನಾಲ್ಕು ವಿಭಾಗೀಯ ಕಚೇರಿಗಳಲ್ಲಿ 38 ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳಾದ  ಚರಂಡಿ ಸಂಸ್ಕರಣಾ ಘಟಕ, ಬೃಹತ್ ನೀರು ಸರಬರಾಜು ಮತ್ತು ವಿದ್ಯುತ್ ಉಪ-ನಿಲ್ದಾಣದಂತಹ ವ್ಯವಸ್ಥೆಯನ್ನು ಒದಗಿಸಲಾಗಲಿಲ್ಲ ಎನ್ನುವುದನ್ನು ವರದಿಯಲ್ಲಿ ಉಲ್ಲೇಖವಾಗಿದೆ. ಇನ್ನು ಕೆಎಸ್ ಪಿಸಿಬಿ ಸಹ ತಾನು ಸಿಎಜಿಯಿಂದ ಟೀಕೆಗೆ ತುತ್ತಾಗಿದ್ದು ರಾಜ್ಯದಲ್ಲಿನ ಮಾಲಿನ್ಯ ಬೋರ್ಡ್ ಗಳ ವಿವರವಾದ ಡೆಟಾ ಶೀಟ್ ಗಳನ್ನು ರಚಸದೆ ಪಿಸಿಬಿ ನುಣುಚಿಕೊಂಡಿದೆ ಎಂದು ಸಿಎಜಿ ಆರೋಪಿಸಿದೆ. "ಕೆಎಸ್ ಪಿಸಿಬಿ ನಲವತ್ತು ವರ್ಷದ ಸಂಸ್ಥೆಯಾಗಿಯೂ 2017 ಮಾರ್ಚ್ ವರೆಗೆ ಸಹ ಇಂತಹಾ ಒಂದು ಡೇಟಾ ವನ್ನು ಹೊಂದಿಲ್ಲ. ತಾನು ಹಲವು ಕೈಗಾರಿಕೋದ್ಯಮಗಳಿಗೆ ನೀಡಿದ್ದ ಮಾನ್ಯತೆಯನ್ನು ಮೇಲ್ವಿಚಾರಣೆ ನಡೆಸಲು ಯಾವ ಯಂತ್ರ ವ್ಯವಸ್ಥೆಯನ್ನು ಮಂಡಳಿ ಅಳವಡಿಸಿಕೊಂಡಿಲ್ಲ. ಮಂಡಳಿಯ 13 ಪ್ರಾದೇಶಿಕ ಕಚೇರಿಗಳಲ್ಲಿ 379 ಘಟಕಗಳು ಯಾವ ಮಾನ್ಯತೆ ಇಲ್ಲದೆ ಕಾರ್ಯಾಚರಿಸುತ್ತಿದೆ." ಮುಖರ್ಜಿ ಹೇಳಿದ್ದಾರೆ.
ಆಡಿಟ್ ವರದಿ ಪ್ರಕಾರ ರಾಜ್ಯದಲ್ಲಿ  162 ಕೈಗಾರಿಕಾ ಪ್ರದೇಶಗಳಲ್ಲಿ  18,578 ಘಟಕಗಳು,ಇದೆ. ಆದರೆ ಇದರಲ್ಲಿ 7,451 ಘಟಕಗಳು ಮಾತ್ರ ಸಾಮಾನ್ಯ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲಾಂಟ್ ಸೌಲಭ್ಯವನ್ನು ಹೊಂದಿದೆ. ಆಡಿಟ್ ನಡೆಸಿದ ಬಳಿಕ ಮಂಡಳಿಯು ಹೊಸದಾಗಿ ಸಮಗ್ರ ವರದಿಯೊಂದನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಯಾವುದೇ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಅನುಸರಿಸದ 33ಕ್ಕೂ ಹೆಚ್ಚು ಮಾಲಿನ್ಯಕಾರಕ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಡಳಿಯು ವಿಫಲವಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com