ಮಸಣಿಕವ್ವ ದೇವಾಲಯ
ಮಸಣಿಕವ್ವ ದೇವಾಲಯ

ಬೆಳಗಾವಿ: ಕಳ್ಳತನವಾಗಿರುವ ಗಂಟೆ ಪತ್ತೆ ಹಚ್ಚಲು ದೇವರಿಗೆ ಗಡುವು ನೀಡಿದ ಗ್ರಾಮಸ್ಥರು!

ದೇವಾಲಯದ ಗಂಟೆ ಕಳುವಾಗಿದ್ದು ದೇವರು, ತನ್ನ ಶಕ್ತಿಯಿಂದ 9 ದಿನಗಳಲ್ಲಿ ನಾಪತ್ತೆಯಾಗಿರುವ ಗಂಟೆಯನ್ನು ಪತ್ತೆ ಹಚ್ಚಬೇಕೆಂದು ದೇವರಿಗೆ ಡೆಡ್ ಲೈನ್ ನೀಡಿರುವ ...
Published on
ಬೆಳಗಾವಿ: ದೇವಾಲಯದ ಗಂಟೆ ಕಳುವಾಗಿದ್ದು ದೇವರು, ತನ್ನ ಶಕ್ತಿಯಿಂದ 9 ದಿನಗಳಲ್ಲಿ ನಾಪತ್ತೆಯಾಗಿರುವ ಗಂಟೆಯನ್ನು ಪತ್ತೆ ಹಚ್ಚಬೇಕೆಂದು ದೇವರಿಗೆ ಡೆಡ್ ಲೈನ್ ನೀಡಿರುವ ಘಟನೆ ಬೆಳಗಾವಿಯ ಅಗಸಾಗ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯಿಂದ 12 ಕಿಮೀ ದೂರದಲ್ಲಿರುವ ಅಗಸಾಗ ಗ್ರಾಮದಲ್ಲಿ ಹಲವು ದಶಕಗಳಿಂದ ಯಾವುದೇ ಕಳ್ಳತನ ಅಥವಾ ದರೋಡೆ ನಡೆದಿರಲಿಲ್ಲ, ಹೀಗಾಗಿ ಗ್ರಾಮಸ್ಥರು ತಮ್ಮ ಮನೆಯ ಬಾಗಿಲುಗಳನ್ನು ಮುಚ್ಚುತ್ತಿರಲಿಲ್ಲ, 
ದೇವಿ ಮಸಣಿಕವ್ವ ತಮ್ಮ ಗ್ರಾಮವನ್ನು ಕಾಯುತ್ತಿದ್ದಾಳೆ ಎಂಬ ನಂಬಿಕೆಯಲ್ಲಿ ಮನೆಯ ಮುಂಭಾಗ ಅಥವಾ ಅವರರವ ಜಮೀನುಗಳಲ್ಲೇ ಕೃಷಿ ಯಂತ್ರೋಪಕರಣಗಳನ್ನು ಇಡುತ್ತಿದ್ದರು ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ ಇಲ್ಲಿರುವ ದೇವಾಲಯಕ್ಕೆ ಪೂಜಾರಿ ಕೂಡ ಇಲ್ಲ. 
ಹೀಗಿದ್ದ ಈ ಗ್ರಾಮದ ದೇವಾಲಯದಲ್ಲಿ ಕಳೆದ ಶನಿವಾರ ಗಂಟೆ ಕಳುವಾಗಿರುವುದು ಎಲ್ಲರೂ ಹೌಹಾರುವಂತೆ ಮಾಡಿದೆ. ಹೀಗಾಗಿ ಅವರೆಲ್ಲಾ ದೇವರ ಶಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದ್ದಾರೆ, ದೇವಾಲಯದ ಮುಂದೆ ಸೇರಿದ ಊರಿನ ಗ್ರಾಮಸ್ಥರು, ದೊಡ್ಡ ಕಬ್ಬಿಣದ ಸರಪಳಿಯೊಂದನ್ನು ದೇವಾಲಯದ ಮುಂದಿನ ಬಾಗಿಲಲ್ಲಿ  ಕಟ್ಟಿ ದ್ದಾರೆ, ದೇವಿ ಕಳ್ಳನನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ. ತನ್ನ ನಿಜವಾದ ಶಕ್ತಿ ಉಪಯೋಗಿಸಿ ಕಳ್ಳನನ್ನು ಹಿಡಿದು ಗಂಟೆಯನ್ನು ವಾಪಸ್ ತರುವಂತೆ ಗಡುವು ನೀಡಿದ್ದಾರೆ.
ಜೊತೆಗೆ 9 ದಿನಗಳಲ್ಲಿ ಎಲ್ಲವನ್ನು ಸರಿಪಡಿಸಬೇಕು ಎಂದು ಡೆಡ್ ಲೈನ್ ನೀಡಿದ್ದಾರೆ. ಒಂದು ವೇಳೆ ಗಂಟೆಯನ್ನು ವಾಪಸ್ ತರದಿದ್ದರೇ ದೇವರಿಗೆ ಪೂಜೆ ಸಲ್ಲಿಸಬಾರದೆಂದು ನಿರ್ಣಯ ಹೊರಡಿಸಿದ್ದಾರೆ, ಇನ್ನೂ ಗಂಟೆ ಸಿಗುವವರಗೊ ಯಾರೋಬ್ಬರು ದೇವಲಾಯದೊಳಗೆ ಕಾಲಿಡದಂತೆ ಶಪಥ ಮಾಡಿದ್ದಾರೆ. 

X

Advertisement

X
Kannada Prabha
www.kannadaprabha.com