ಮ್ಯಾನ್ ಹೋಲ್ ದುರಂತಕ್ಕೆ ತರಬೇತಿ ಪಡೆಯದ ಕಾರ್ಮಿಕರೇ ಕಾರಣ: ಸಚಿವ ಕೆ.ಜೆ.ಜಾರ್ಜ್

ರಸ್ತೆಗಳ ವಿಸ್ತರಣೆ ಮತ್ತು ಇತರ ಕಾಮಗಾರಿಗಳಿಂದ ನೀರುಗಳು ಮತ್ತು ಚರಂಡಿ ನೀರುಗಳು ರಸ್ತೆಗೆ ನುಗ್ಗಿ...
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್

 ಬೆಂಗಳೂರು:  ನಗರದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಐವರು ಪೌರ ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತರಬೇತಿ ಪಡೆಯದ ಕಾರ್ಮಿಕರಿಂದ ಕಟ್ಟಡ ನಿರ್ಮಾಣ ಮಾಡಿಸುವ ಅಪಾರ್ಟ್ ಮೆಂಟ್ ಮಾಲೀಕರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ನಿನ್ನೆ ವಿಧಾನಪರಿಷತ್ತಿನಲ್ಲಿ ಮಾತನಾಡಿದ ಅವರು, ಬೆಂಗಳೂರು ನೀರು ಸರಬರಾಜು ಮಂಡಳಿಯಲ್ಲಿ ಮ್ಯಾನ್ ಹೋಲ್ ಗಳನ್ನು ಸ್ವಚ್ಛಗೊಳಿಸಲು ತರಬೇತಿ ಪಡೆದ ಸಿಬ್ಬಂದಿ ಇದ್ದಾರೆ. ಆದರೆ ಕಡಿಮೆ ವೆಚ್ಚದ ದೃಷ್ಟಿಯಿಂದ ಅವರ ಸೇವೆಗಳನ್ನು ಅಪಾರ್ಟ್ ಮೆಂಟ್ ಮಾಲೀಕರು ಬಳಸುವುದಿಲ್ಲ ಎಂದು ಆರೋಪಿಸಿದರು.

ಮ್ಯಾನ್ ಹೋಲ್ ಸ್ವಚ್ಛ ಮಾಡುವುದಕ್ಕೆ ನಿರ್ದಿಷ್ಟ ವಿಧಾನಗಳಿವೆ. ಆದರೆ ಅದನ್ನು ಪಾಲಿಸಲಾಗುತ್ತಿಲ್ಲ. ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದ್ದು ತರಬೇತಿ ಪಡೆದ ಕಾರ್ಮಿಕರನ್ನು ಬಳಸುವಂತೆ ಬಿಡಬ್ಲ್ಯುಎಸ್ಎಸ್ ಬಿ ಮನವಿ ಮಾಡುತ್ತಿದೆ ಎಂದರು.

ರಸ್ತೆಗಳ ವಿಸ್ತರಣೆ ಮತ್ತು ಇತರ ಕಾಮಗಾರಿಗಳಿಂದ ನೀರು ಮತ್ತು ಚರಂಡಿ ನೀರುಗಳು ರಸ್ತೆಗೆ ನುಗ್ಗಿ ಹರಿದು ಪ್ರಯಾಣಿಕರಿಗೆ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮ್ಯಾನ್ ಹೋಲ್ ಗಳನ್ನು ರಸ್ತೆಯ ಎತ್ತರಕ್ಕೆ ಎತ್ತರಿಸಿ ಅಥವಾ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಲಾಪ ವೇಳೆ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1.,50,600 ಮ್ಯಾನ್ ಹೋಲ್ ಗಳಿವೆ ಎಂದು ಹೇಳಿದರು.

ಶಿಥಿಲಗೊಂಡ ಮ್ಯಾನ್ ಹೋಲ್ ಗಳ ದುರಸ್ತಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ನಡೆಸುತ್ತಿದೆ. 2014-15ರಲ್ಲಿ 7,115 ಮ್ಯಾನ್ ಹೋಲ್ ಗಳನ್ನು ದುರಸ್ತಿ ಮಾಡಲಾಗಿದೆ ಅಥವಾ ಕೆಲವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. 2015-16ರಲ್ಲಿ 10,090 ಮತ್ತು 2016-17ರಲ್ಲಿ 15,900 ಮ್ಯಾನ್ ಹೋಲ್ ಗಳನ್ನು ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಅಗತ್ಯವಿರುವೆಡೆ ಹಂತಹಂತವಾಗಿ ಮ್ಯಾನ್ ಹೋಲ್ ಗಳನ್ನು ಬೇರಡೆಗೆ ವರ್ಗಾಯಿಸಲಾಗುವುದು. ಟೆಂಡರ್ ಶ್ಯೂರ್ ರಸ್ತೆಯ ಜೊತೆಗೆ ಒಳಚರಂಡಿ ಮಾರ್ಗಗಳ ನ್ನು ಪಾದಚಾರಿ ಮಾರ್ಗದ ಕೆಳಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com