86ನೇ ವಯಸ್ಸಲ್ಲೂ ಕುಗ್ಗದ ಉತ್ಸಾಹ: ಬರಿಗಾಲಲ್ಲೇ ವಿಂದ್ಯಗಿರಿ ಬೆಟ್ಟ ಹತ್ತಿಳಿದ ದೇವೇಗೌಡ

ಶ್ರವಣಬೆಳಗೊಳದ ವಿಂಧ್ಯಗಿರಿಯನ್ನೇರಲು ಡೋಲಿ ನಿರಾಕರಿಸಿ 400ಕ್ಕೂ ಅಧಿಕ ಮೆಟ್ಟಿಲುಗಳನ್ನು ಬರಿಗಾಲಲ್ಲೇ ಹತ್ತಿದ ಮಾಜಿ ಪ್ರಧಾನಿ ...
ವಿಂದ್ಯಗಿರಿ ಬೆಟ್ಟ ಹತ್ತಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ
ವಿಂದ್ಯಗಿರಿ ಬೆಟ್ಟ ಹತ್ತಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ
ಶ್ರವಣಬೆಳಗೊಳ: ಶ್ರವಣಬೆಳಗೊಳದ ವಿಂಧ್ಯಗಿರಿಯನ್ನೇರಲು ಡೋಲಿ ನಿರಾಕರಿಸಿ 400ಕ್ಕೂ ಅಧಿಕ ಮೆಟ್ಟಿಲುಗಳನ್ನು ಬರಿಗಾಲಲ್ಲೇ ಹತ್ತಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಶ್ರೀ ಬಾಹುಬಲಿಮೂರ್ತಿಗೆ ಶನಿವಾರ ಮಹಾಮಸ್ತಕಾಭಿಷೇಕ ನೆರವೇರಿಸಿದ್ದಾರೆ.
ಮಧ್ಯಾಹ್ನ 12.25ರ ಸುಮಾರಿಗೆ  ವಿಂಧ್ಯ ಗಿರಿಯ ಪಶ್ಚಿಮದ ಪ್ರವೇಶದ್ವಾರದ ಬಳಿ ಪತ್ನಿ ಚನ್ನಮ್ಮ ಅವರೊಂದಿಗೆ ಕಾರಿನಲ್ಲಿ ಬಂದಿಳಿದ ದೇವೇಗೌಡರಿಗೆ ಡೋಲಿಗಳನ್ನು ಕಾಯ್ದಿರಿಸಲಾಗಿತ್ತು. ಅದರೆ ಡೋಲಿ ಹತ್ತಲು ನಿರಾಕರಿಸಿ ಮೆಟ್ಟಲುಗಳನ್ನು ಹತ್ತಿಯೇ ಬಾಹುಬಲಿಗೆ ಅಭಿಷೇಕ ನೆರವೇರಿಸುವುದಾಗಿ ಹೇಳಿದಾಗ ಅವರ ಅಂಗರಕ್ಷಕರು, ಜೆಡಿಎಸ್‌ ಮುಖಂಡರು ಅವಕ್ಕಾದರು. ಅಂಗರಕ್ಷಕರ ಹೆಗಲ ಮೇಲೆ ಮಾಮೂಲಿನಂತೆ ಕೈ ಹಾಕಿಕೊಂಡು ಮೆಟ್ಟಿಲೇರಲು ಆರಂಭಿಸಿದರು.
ತಮ್ಮ 86ನೇ ವಯಸ್ಸಿನಲ್ಲಿಯೂ 412 ಮೆಟ್ಟಿಲೇರಿದ ಗೌಡರು ಬಳಿಕ ಬಾಹುಬಲಿಗೆ ಅಭಿಷೇಕ ನೆರವೇರಿಸಿದರು. ಮಾರ್ಗಮಧ್ಯೆ 3 ಕಡೆ ನಿಂತು ವಿಶ್ರಾಂತಿ ಪಡೆದರು.
ಅಭಿಷೇಕ ಮುಗಿಸಿ ಹಿಂದಿರುಗುವಾಗಲೂ ಗೌಡ ಡೋಲಿ ನಿರಾಕರಿಸಿ ಮೆಟ್ಟಿಲುಗಳನ್ನು ಇಳಿದರು. 2006ನೇ ವರ್ಷದಲ್ಲಿ ಮಹಾಮಸ್ತಾಕಾಭಿಷೇಕ ನಡೆದಾಗ ದೇವೇಗೌಡರು  ತಮ್ಮ ಕುಟುಂಬಸ್ಥರೊಂದಿಗೆ ಡೋಲಿಯಲ್ಲಿ ತೆರಳಿ ವಿರಾಗಿಯ ದರ್ಶನ ಪಡೆದಿದ್ದರು, ಆದರೆ ಈ ಬಾರಿ ಡೋಲಿ ನಿರಾಕರಿಸಿ ಮೆಟ್ಟಿಲೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com