
ಬೆಂಗಳೂರು: ರೈಲು ಹಳಿಗಳು ಮತ್ತು ಇತರ ವ್ಯವಸ್ಥೆಗಳ ನಿರ್ವಹಣೆ ಕಾಮಗಾರಿ ಕೈಗೊಳ್ಳಲು 42.3-ಕಿಮೀ ಜಾಲ ಹೊಂದಿರುವ ಮೆಟ್ರೊ ರೈಲು ತಾತ್ಕಾಲಿಕವಾಗಿ ವಾರಾಂತ್ಯಗಳಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ನಿರ್ವಹಣೆ ಕಾರ್ಯ ನಡೆಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೆಟ್ರೊ ನಿಗಮದ ಕಾರ್ಯನಿರ್ವಹಣೆ ಮತ್ತು ಉಸ್ತುವಾರಿ ವಿಭಾಗದ ನಿರ್ದೇಶಕ ಆರ್.ಎಂ.ದೊಕೆ ತಿಳಿಸಿದ್ದಾರೆ.
ಈ ವಾರ ಆರ್ ವಿ ರಸ್ತೆ ಮತ್ತು ಯೆಲಚೇನಹಳ್ಳಿ ಮಧ್ಯೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಂತೆ ಮುಂದಿನ ವಾರಗಳಿಂದ ಒಂದೊಂದು ಕಡೆ ಸಂಚಾರ ಸ್ಥಗಿತಗೊಳಿಸಲಾಗುವುದು ಇದನ್ನು ಬೇರೆ ಮೆಟ್ರೊ ನಗರ ಮತ್ತು ಬೇರೆ ದೇಶಗಳಲ್ಲಿಯೂ ಕೂಡ ಮಾಡಲಾಗುತ್ತದೆ ಎಂದು ದೊಕೆ ತಿಳಿಸಿದರು,
ರೈಲು ಹಳಿಗಳು ಹಾಳಾಗಿವೆ ಎಂದು ಅದರರ್ಥವಲ್ಲ.ಮೆಟ್ರೊ ರೈಲು ಸಂಚಾರವಾಗದಿರುವ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವು ಮಾರ್ಗಗಳಲ್ಲಿ ನಿರ್ವಹಣೆ ಕಾರ್ಯ ನಡೆಸಲು ಹೆಚ್ಚಿನ ಸಮಯ ಬೇಕಾಗುತ್ತದೆ.ಹೀಗೆ ಮೆಟ್ರೊ ರೈಲುಗಳ ಸಂಚಾರ ಪ್ರತಿ ಮೂರು ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ನಡೆಯುತ್ತಿರಬಹುದು ಎಂದು ತಿಳಿಸಿದರು.
Advertisement